Ad imageAd image

ಹಂದರಕಿಯಲ್ಲಿ ಮೂರು ಜನ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ.

Bharath Vaibhav
ಹಂದರಕಿಯಲ್ಲಿ ಮೂರು ಜನ ಶಿಕ್ಷಕರಿಗೆ ಅದ್ದೂರಿ ಬೀಳ್ಕೊಡುಗೆ.
WhatsApp Group Join Now
Telegram Group Join Now

ಸೇಡಂ:- ಸರಕಾರಿ ಪ್ರೌಢಶಾಲೆ ಹಂದರಕಿ ಗ್ರಾಮದ ಮೂರು ಜನ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು.

ಶಾಲೆಯ ಶಿಕ್ಷಕರಾದ ಸುಂದರ್ ಅವರು 2004ರಿಂದ 2024ವರಗೆ ಸರಿ ಸುಮಾರು 20ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಹಾಗೂ ಶಿಕ್ಷಕರಾದ ಆಕಾಶ್ ಅವರು 14ವರ್ಷ ಮತ್ತು ಶಿಕ್ಷಕರಾದ ಶಂಕರ್ ಅವರು 2ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಂದರಕಿ ಸುತ್ತಮುತ್ತಲಿನ ಹಳ್ಳಿಗಳಾದ ಗೌಡನಹಳ್ಳಿ, ನಾಚವಾರ, ಹುಳುಗೋಳ ಗ್ರಾಮಗಳ 2004ರಿಂದ 2024ವರೆಗೆ ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಸೇರಿ ತಮ್ಮ ಪ್ರೀತಿಯ ಶಿಕ್ಷಕರಿಗೆ ಡಿಜೆ ಮತ್ತು ಹಾಲಿಗೆಯ ಮೂಲಕ ಹಂದರಕಿ ಗ್ರಾಮದ ಜಗಲಿಂಗೇಶ್ವರ ದೇವಸ್ಥಾನದಿಂದ ಸರಕಾರಿ ಪ್ರೌಢ ಶಾಲೆ ವರೆಗೆ ಹೋವಿನ ಸುರಿಮಳೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ತಲುಪಿತು.

ತದನಂತರ ಎಲ್ಲಾ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳು ಸೇರಿ ತ್ರಿಮೂರ್ತಿಗಳಾದ ಶಿಕ್ಷಕರಿಗೆ ಸನ್ಮಾನ ಮಾಡಿ ಗುರುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಗುರಿ ಮತ್ತು ಗುರಿ ಮನುಷ್ಯನಿಗೆ ಇರಲೇಬೇಕು ನಾನು ಗುರು ಅನ್ನುವ ಪದದ ಅರ್ಥ ತಿಳಿದುಕೊಂಡಿದ್ದೆ ಸುಂದರ್ ಸರ್ ಅವರಿಂದ. ಅವರು ನನಗೆ ತುಂಬಾ ದೇಶಭಕ್ತರ ಪಾಠದ ಜೊತೆಗೆ ಆಟದ ಆಸಕ್ತಿಯುಳ್ಳ ಶಿಕ್ಷಕರು ನೂರಾರು ಯುವಕರ ಭವಿಷ್ಯಕ್ಕೆ ದಾರಿ ತೋರಿಸಿದಂತಹ ಎಲ್ಲರ ಅಚ್ಚುಮೆಚ್ಚಿನ ಗುರುಗಳು ಎಂದು ಹಳೆಯ ವಿದ್ಯಾರ್ಥಿಯಾದ ಮೌನೇಶ್ ಗುತ್ತೇದಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವನ್ನು ಎಲ್ಲಾ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೇರಿ ಅಚ್ಚು ಮೆಚ್ಚಾಗಿ ಅದ್ದೂರಿಯಾಗಿ ಯಶಸ್ವಿ ಮಾಡಿದರು.ಈ ಕಾರ್ಯಕ್ರಮ ಮತ್ತು ಮೆರವಣಿಗೆ ನೋಡಿದರೆ ಅಬ್ಬಬ್ಬಾ ಶಿಕ್ಷಕರು ಅಂದರೆ ಇವರು ನೋಡಿರಪ್ಪ.ಎಂತಹ ಅದೃಷ್ಟ ಇವರದು. ಇವರು ಕಲಿಸಿರುವ ಪಾಠಗಳು ಮತ್ತು ಇವರ ವಿದ್ಯಾರ್ಥಿಗಳ ಪರವಾಗಿ ತೋರಿಸಿದ ಪ್ರೀತಿ ವಿಶ್ವಾಸ ಎಲ್ಲವೂ ಕಂಡುಬರುತ್ತಿದೆ.ಅದಕ್ಕೆ ಅನ್ನೋದು ಅದೃಷ್ಟ ಎಂದರೆ ವಿದ್ಯಾ ಕಲಿಸುವ ಗುರುಗಳದ್ದು ಅಂತ. ಎಂದು ಕೆಲ ಜನರು ಮಾತನಾಡಿದ್ದು ಕಂಡು ಬಂದಿದೆ.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!