Ad imageAd image

ಅಜ್ಜಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಸಾವು 

Bharath Vaibhav
ಅಜ್ಜಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಸಾವು 
WhatsApp Group Join Now
Telegram Group Join Now

ಧಾರವಾಡ: ಅಜ್ಜಿ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಸಮೀಪ ನಡೆದಿದೆ.

ಧಾರವಾಡ ನಿವಾಸಿ ವಿನಾಯಕ(23) ಮೃತಪಟ್ಟವರು ಎಂದು ಹೇಳಲಾಗಿದೆ. ವಿನಾಯಕನ ಅಜ್ಜಿಯ ಸಂಸ್ಕಾರ ಸುಳ್ಳ ಗ್ರಾಮದಲ್ಲಿ ನಡೆಸಲಾಗಿತ್ತು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೈಕ್ ನಲ್ಲಿ ಸುಳ್ಳ ಗ್ರಾಮಕ್ಕೆ ಹೋಗಿದ್ದ ವಿನಾಯಕ ಅಂತಿಮ ವಿಧಿವಿಧಾನ ಮುಗಿದ ನಂತರ ಧಾರವಾಡಕ್ಕೆ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ.

ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ವಿನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ದಿನ ಅಜ್ಜಿ, ಮೊಮ್ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!