Ad imageAd image

ಲೋಕಸಭಾ ವ್ಯಾಪ್ತಿಯ ಅಣ್ಣ ಸಾಹೇಬ್ ಜೊಲ್ಲೆ ಕುಡಚಿ ಕ್ಷೇತ್ರದ ಜನರಿಗೆ ಕೃತಜ್ಞತೆ

Bharath Vaibhav
ಲೋಕಸಭಾ ವ್ಯಾಪ್ತಿಯ ಅಣ್ಣ ಸಾಹೇಬ್ ಜೊಲ್ಲೆ ಕುಡಚಿ ಕ್ಷೇತ್ರದ ಜನರಿಗೆ ಕೃತಜ್ಞತೆ
WhatsApp Group Join Now
Telegram Group Join Now

ಕುಡಚಿ :-ಆಲಕನೂರ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಅವಲೋಕನ ಸಭೆ ಹಾಗೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಕೃತಜ್ಞತೆ ಸಲ್ಲಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ,ಆದರೆ ಸೋಲನ್ನೇ ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಮತ್ತೆ ಪಕ್ಷ ಸಂಘಟನೆಯತ್ತ ಗಮನಹರಿಸೋಣ.ಮುಂಬರುವ ಎಲ್ಲಾ ಚುನಾವಣೆಯೂ ಭಾರತೀಯ ಜನತಾ ಪಕ್ಷದ ಚುನಾವಣೆಯಾಗಿರಲಿದೆ.ಜೊಲ್ಲೆ ಪರಿವಾರ ಸದಾ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ,ಮಂಡಲ ಅಧ್ಯಕ್ಷರಾದ ಶ್ರೀ ಶ್ರೀಧರ ಮೂಡಲಗಿ,ಶ್ರೀ ಮಲ್ಲಿಕಾರ್ಜುನ ಖಾನಗೌಡರ ಶ್ರೀ ಮಲಗೌಡ ಪಾಟೀಲ,ಶ್ರೀ ಕುಮಾರ ಬನಶಂಕರಿ ಶ್ರೀ ಮಾದೇವ ತೇರದಾಳ,ಶ್ರೀ ಮಾಯಪ್ಪ ಕಾರಟಗಿ, ಶ್ರೀ ಹೊನ್ನಪ್ಪ ಕಾರಟಗಿ, ಶ್ರೀ ಚೇತನ ಬಿಜ್ಜರಗಿ, ಶ್ರೀ ಸುಭಾಷ ಕೋಕಟನೂರ, ಶ್ರೀ ಬಸವರಾಜ ಖೋತ,ಸ್ಥಳೀಯ ಮುಖಂಡರು,ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!