Ad imageAd image

ಭಾರತಕ್ಕೆ ಬಂದಿಳಿದ ಕ್ರಿಕೆಟ್ ಆಟಗಾರರಿಗೆ ಅದ್ಧೂರಿ ಸ್ವಾಗತ

Bharath Vaibhav
ಭಾರತಕ್ಕೆ ಬಂದಿಳಿದ ಕ್ರಿಕೆಟ್ ಆಟಗಾರರಿಗೆ ಅದ್ಧೂರಿ ಸ್ವಾಗತ
WhatsApp Group Join Now
Telegram Group Join Now

ಮುಂಬೈ ​: ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿರುವ ಭಾರತ ಕ್ರಿಕೆಟ್​ ತಂಡದ ಆಟಗಾರರು ದುಬೈನಿಂದ ಭಾರತಕ್ಕೆ ವಾಪಸ್ಸಾದರು. ವಿವಿಧ ವಿಮಾನ ನಿಲ್ದಾಣಗಳಿಗೆ ಬಂದಿಳಿದ ನೆಚ್ಚಿನ ಆಟಗಾರರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ದುಬೈನಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಆಡಿದ ಭಾರತ ತಂಡ ಸೋಲರಿಯದ ಸರದಾರನಾಗಿ ಟ್ರೋಫಿ ಜಯಿಸಿತು. ಫೈನಲ್​ ಪಂದ್ಯದಲ್ಲಿ ಕಠಿಣ ಎದುರಾಳಿ ನ್ಯೂಜಿಲ್ಯಾಂಡ್​ ಅನ್ನು ಮಣಿಸಿತು. ಈ ಮೂಲಕ 9 ತಿಂಗಳ ಅಂತರದಲ್ಲಿ ಎರಡು ಐಸಿಸಿ ಟೂರ್ನಿಗಳನ್ನು ಗೆದ್ದುಕೊಂಡಿತು.

ಇದಕ್ಕೂ ಮೊದಲು ಭಾರತ 2023ರಲ್ಲಿ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದ ಟಿ20 ವಿಶ್ವಕಪ್​ ಅನ್ನು ಮುಡಿಗೇರಿಸಿಕೊಂಡಿತ್ತು.

ಆಟಗಾರರಿಗೆ ಅದ್ಧೂರಿ ಸ್ವಾಗತಭಾರತ ತಂಡದ ನಾಯಕ ರೋಹಿತ್​ ಶರ್ಮಾ, ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನೆರೆದಿದ್ದ ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಚಾಂಪಿಯನ್ನರನ್ನು ಸ್ವಾಗತಿಸಿದರು.

ರವೀಂದ್ರ ಜಡೇಜಾ, ವರುಣ್​​ ಚಕ್ರವರ್ತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಕ್ಷರ್​ ಪಟೇಲ್​​ ಗುಜರಾತ್​​ ವಿಮಾನ ನಿಲ್ದಾಣ, ವೇಗದ ಬೌಲರ್​ ಹರ್ಷಿತ್​ ರಾಣಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

12 ವರ್ಷಗಳ ಬಳಿಕ ಚಾಂಪಿಯನ್ಸ್ಟ್ರೋಫಿ ಗೆಲುವು12 ವರ್ಷಗಳ ಬಳಿಕ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. 2013ರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ಪ್ರಶಸ್ತಿ ಜಯಿಸಿತ್ತು. ಇದೀಗ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಟೀಮ್ ಇಂಡಿಯಾ 2025ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಮೂರನೇ ಬಾರಿಗೆ ಚಾಂಪಿಯನ್ಸ್​ ಟ್ರೋಫಿ ವಶಪಡಿಸಿಕೊಂಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!