Ad imageAd image

ನಗರಾಭಿವೃದ್ಧಿ ಸಮಿತಿ ವತಿಯಿಂದ ಜಾಕಿರಹುಸೇನ್ ತಾಳಿಕೋಟಿ ಹಾಗೂ ಎಸ್ ಎಮ್ ಲೋಣಿಯವರಿಗೆ ಸತ್ಕಾರ

Bharath Vaibhav
WhatsApp Group Join Now
Telegram Group Join Now

ಇಲಕಲ್:-  ಬಾಗಲ್ಕೋಟ್ ಜಿಲ್ಲಾ ಕಾರ್ಯನಿರತ ಸಂಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇಳ್ಕಲ್ ನಗರದ ಜಾಕಿರ್ ಹುಸೇನ್ ತಾಳಿಕೋಟಿ ಅವರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಯಾಗಿ ಎಸ್ ಐ ಹುದ್ದಿಗೆ ಪದೋನ್ನತಿ ಹೊಂದಿದ ಎಸ್ ಎಂ ಲೋಣಿ ಇವರಿಬ್ಬರಿಗೂ ಇಳಕಲ್ ನಗರಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಸಿಸಿ ಚಂದ್ರಪಟ್ಟಣ ನಮ್ಮ ಇಲ್ಕಲ್ ನಗರಕ್ಕೆ ಬಾಗಲಕೋಟ್ ಜಿಲ್ಲಾ ಪಾಧಕರ ಸಂಘದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು ನಮಗೆ ಸಂತೋಷದ ಸಂಗತಿ, ಅದು ನಮ್ಮ ಆತ್ಮೀಯ ಬಳಗದ ಸದಸ್ಯರಾದ ಜಾಕಿರ್ ಹುಸೇನ್ ತಾಳಿಕೋಟೆಯವರಿಗೆ ಲಭಿಸಿದ್ದು ಸಂತೋಷದ ವಿಷಯ ಎಂದರು, ಅಲ್ಲದೆ ಪದೋನತಿ ಹುದ್ದೆ ಹೊಂದಿದ ಎಸ್ಎಮ್ ಲೋನಿ ಅವರಿಗೂ ಸಹ ಇನ್ನು ಉನ್ನತ ಸ್ಥಾನಗಳು ಲಭಿಸಲಿ ಎಂದು ಶುಭ ಹಾರೈಸಿದರು.

ಈ ಸರಳ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು,ಪತ್ರಕರ್ತರು ಉಪಸ್ಥಿತರಿದ್ದರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!