Ad imageAd image

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆ‌.

Bharath Vaibhav
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆ‌.
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಮತ್ತು ತಾಲೂಕಾಡಳಿತ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಾಂಗದ ಕುಂದುಕೊರತೆ ಸಭೆಯನ್ನು ತಹಶೀಲ್ದಾರ್ ಕೆ.ನರಸಪ್ಪ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಎರಡು ಪರಿಶಿಷ್ಟ ಸಮುದಾಯಗಳಲ್ಲಿನ ಕುಂದು ಕೊರತೆಯನ್ನು ಆಲಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಕರೆಯಲಾಗುತ್ತಿದ್ದು, ನಿಮ್ಮ ಸಮಸ್ಯೆಗಳ ಅಹವಾಲಿಗೆ ಅವಕಾಶ ಮಾಡಿಕೊಡಲಾಗುವುದೆಂದರು.

ಕರೂರು ಗ್ರಾಮದ ಪಾರ್ವತಮ್ಮ ಎಂಬ ಮಹಿಳೆಯು ತಮ್ಮ ಜಮೀನಿನ ನೀರಾವರಿಗಾಗಿ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿರುವೆ. 2018 ರಿಂದ ಸರ್ಕಾರದ ಇಲಾಖೆಗಳಿಗೂ ಅಲೆಯುತ್ತಿದ್ದೇನೆ. ನಮ್ಮ ಜೀವನೋಪಾಯಕ್ಕೆ ನೀರಾವರಿ ಕಲ್ಪಿಸುವಂತೆ ಸಭೆಯಲ್ಲಿ ಕಣ್ಣೀರಿಟ್ಟರು.

ಸಭೆಯಲ್ಲಿ ಹಲವಾರು ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಯ ವಿಳಂಬದ ಬಗ್ಗೆ ಸ್ಪಷ್ಟೀಕರಣ ಕೇಳಿದರು.

ಪೋಲೀಸ್ ಠಾಣೆಗಳಲ್ಲಿ ದಲಿತರ ಸಮಸ್ಯೆಯನ್ನು ಬಗೆಹರಿಸದೇ ಗೂಂಡಾ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ಆರೋಪಿಸಲಾಯಿತು.

ಇಡೀ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಬೀಡಿ ಅಂಗಡಿಗಳಲ್ಲಿಯೂ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಇನ್ನಿತರ ಅಕ್ರಮ ಚಟುವಟಿಕೆಗಳಿಂದಲೇ ಸಮುದಾಯಗಳ ಬೆಳವಣಿಗೆ ಹಿನ್ನಡೆಯಾಗಲು ಕಾರಣವಾಗಿದೆ.

ಅವುಗಳನ್ನು ತಡೆಗಟ್ಟುವಂತೆ ಹಲವಾರು ಮುಖಂಡರುಗಳು ಒಕ್ಕೋರಲಿನಿಂದ ದನಿಯೆತ್ತಿದರು. ತಕ್ಷಣವೇ ಸಂಬಂದಿಸಿದ ಅಬಕಾರಿ ಹಾಗೂ ಪೋಲೀಸ್ ಇಲಾಖೆಗೆ ಆದೇಶ ನೀಡುವಂತೆ ಒತ್ತಾಯಿಸಿದರು.

ಸಿರುಗುಪ್ಪ ನಗರದಲ್ಲಿರುವ ಶ್ರೀ ವಾಲ್ಮೀಕಿ ವೃತ್ತದ ಬಳಿ ಯಾವಾಗಲು ಕಸದಿಂದ ಮಲಿನತೆ ಹೆಚ್ಚಾಗಿದ್ದು ಸಂಬಂದಪಟ್ಟ ನಗರಸಭೆಯ ವತಿಯಿಂದ ಸ್ವಚ್ಛತೆ ಮುಂದಾಗುವಂತೆ ವಿಜಯಕುಮಾರ್ ಮನವಿ ಮಾಡಿದರು.

ಬಾಗೆವಾಡಿ ಗ್ರಾಮದ ಎಸ್.ಸಿ ಮತ್ತು ಎಸ್.ಟಿ ಓಣಿಗಳಲ್ಲಿ ಜಾಗದ ಸಮಸ್ಯೆಯಿಂದ ವಯಕ್ತಿಕ ಶೌಚಾಲಯವಿಲ್ಲದಂತಾಗಿದ್ದು, ಪಂಚಾಯಿತಿ ವತಿಯಿಂದ ಸಾಮೂಹಿಕ ಶೌಚಾಲಯ ನಿರ್ಮಿಸುವಂತೆ ಪಂಪಯ್ಯ ಮನವಿ ಮಾಡಿದರು.

ದಲಿತ ಸಮುದಾಯದಲ್ಲಿ ಇ-ಖಾತೆ ಅರಿವು ಮೂಡಿಸುತ್ತಿಲ್ಲ. ಅರ್ಜಿ ಸಲ್ಲಿಸಿದರೂ ವಿಳಂಬವಾಗುತ್ತಿದೆಂದು ಗಂಗಣ್ಣ ಅವರು ದೂರಿದರು.

ನರೇಂದ್ರಸಿಂಹ ಅವರು ನಮ್ಮ ಎಸ್.ಸಿ, ಎಸ್.ಟಿ ಸಮುದಾಯಗಳಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗದೇ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಓದುವ ಮಕ್ಕಳು ನಮ್ಮ ಸಮುದಾಯದವರೇ ಆದ್ದರಿಂದ ಪ್ರಗತಿಯ ಬಗ್ಗೆ ತಂಡ ರಚಿಸಬೇಕೆಂದರು.

ಟಿ.ಧರಪ್ಪ ನಾಯಕ ಮಾತನಾಡಿ ನಿಟ್ಟೂರು ಮತ್ತು ಹೆರಕಲ್ ಗ್ರಾಮಗಳು ಹಳೇಕೋಟೆ ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಕ್ಷೇತ್ರಗಳು ಎಸ್.ಟಿ ಮೀಸಲಾತಿಯ ವ್ಯಾಪ್ತಿಯಲ್ಲಿದ್ದು ಆ ಗ್ರಾಮಗಳ ಮದ್ಯದಲ್ಲಿ ತೀವ್ರವಾಗಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿಲ್ಲ.
ಇದರಿಂದ ಬಸ್‌ಗಳು ಮಾತ್ರವಲ್ಲದೇ ದ್ವಿಚಕ್ರ ವಾಹನಗಳ ಸವಾರರಿಗೂ ತುಂಬಾ ತೊಂದರೆಯಾಗಿದೆ. ಸರ್ಕಾರದಿಂದ ಆದಷ್ಟು ಬೇಗನೇ ರಸ್ತೆ ಮಾಡಬೇಕೆಂದು ಆಗ್ರಹಿಸಿರು.

ದೇಶನೂರು ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆಗೆ ಬರುವ ವಾಹನಗಳಿಂದ ರಸ್ತೆ ಹದಗೆಟ್ಟಿದ್ದು ಅಲ್ಲಿನ ದಲಿತ ಜನಾಂಗದ ವಾಸಕ್ಕೆ ತೊಂದರೆಯಾಗಿದ್ದು, ದುರಸ್ತಿಗಾಗಿ ದುರುಗಪ್ಪ ಅವರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರಂಡಿ ಸ್ಚಚ್ಛತಾ ಕಾರ್ಯದಲ್ಲಿ ಯಾವುದೇ ಸುರಕ್ಷತೆಯ ಕಿಟ್‌ಗಳನ್ನು ನೀಡದೇ ದಲಿತರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಟಿ.ಯಲ್ಲಪ್ಪ ದೂರಿದರು.

ಆಗಾಗ ಸಂಬಂದಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾ ನಂತರ ಮಾತನಾಡಿದ ತಹಶೀಲ್ದಾರರು ಈಗ ತಾವೆಲ್ಲರೂ ನೀಡಿದ ದೂರುಗಳು, ಅಹವಾಲುಗಳನ್ನು ಗಮನಿಸಲಾಗಿದ್ದು, ಮುಂದಿನ ಸಭೆಗೂ ಮುನ್ನ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ತಿಳಿಸಲಾಗುವುದೆಂದರು.

ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ ಕುಮಾರ್.ಎಸ್.ದಂಡಪ್ಪನವರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಮುಖಂಡರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!