Ad imageAd image

ಎ ಪಿ ಎಮ್ ಸಿ. ಯ ಹಣ್ಣು ಹಂಪಲ ವರ್ತಕರ ಸಂಘದವರ ಕುಂದುಕೊರತೆ

Bharath Vaibhav
ಎ ಪಿ ಎಮ್ ಸಿ. ಯ ಹಣ್ಣು ಹಂಪಲ ವರ್ತಕರ ಸಂಘದವರ ಕುಂದುಕೊರತೆ
WhatsApp Group Join Now
Telegram Group Join Now

ಬಾಗಲಕೋಟೆ:- ಯ ಎ ಪಿ ಎಮ್ ಸಿ. ಯ ಹಣ್ಣು ಹಂಪಲ ವರ್ತಕರ ಸಂಘದವರ ಕುಂದುಕೊರತೆ ವಿಚಾರಿಸಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಶಿವಾನಂದ ಪಾಟೀಲ.

ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಶಿವಾನಂದ ಪಾಟೀಲ ಇಂದು ನಗರದಎ ಪಿ ಎಮ್ ಸಿ ಯಲ್ಲಿನ ಹಣ್ಣು ಹಂಪಲ ವರ್ತಕರ ಕುಂದುಕೊರತೆಗಳನ್ನು ವಿಚಾರಿಸಿದರು.ಎ ಪಿ ಎಮ್ ಸಿ ಯಲ್ಲಿ ಮೂಲಭೂತ ಸಮಸ್ಯೆಗಳು ತಲೆದೋರಿದ್ದು ತಮ್ಮ ಸಮಸ್ಯೆಗಳನ್ನು ಸಚಿವ ಶಿವಾನಂದ ಪಾಟೀಲ ಅವರ ಎದುರು ಹೇಳಿಕೊಂಡರು.

ಇಲ್ಲಿರುವ ನಿಮ್ಮ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಸರಿಯಡಿಸುತ್ತೇವೆ ಎಂದು ಭರವಸೆ ನೀಡಿದರು. ಮಗಳು ಸಂಯುಕ್ತಾ ಳಿಗೆ ಮತ ನೀಡಿ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

ನಂತರ ಮುಖಂಡರಾದ ಎಸ್ ಆರ್ ಪಾಟೀಲ ಎಸ್. ಆರ್ ಪಾಟೀಲ್, ಶಾಸಕ ಜೆ ಟಿ ಪಾಟೀಲ, ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಸಂಯುಕ್ತಾ ಪಾಟೀಲ ಪರ ಮಾತನಾಡಿ ಮತಯಾಚಿಸಿದರು.

ಇದೇ ಸಂದರ್ಭದಲ್ಲಿಅಭ್ಯರ್ಥಿ ಸಂಯುಕ್ತಾ ಶಿವಾನಂದ ಪಾಟೀಲ,ಮಾಜಿ ಸಂಸದ ಅಜಯಕುಮಾರ ಸರನಾಯಕ, ಸಂಯುಕ್ತಾ ಅವರ ತಂದೆ ಸಚಿವ ಶಿವಾನಂದ ಪಾಟೀಲ,ಮಾಜಿ ಸಚಿವ ಎಸ್. ಪಾಟೀಲ, ಶಾಸಕ, ಜೆ. ಟಿ. ಪಾಟೀಲ, ಎಚ್. ವಾಯ್. ಮೇಟಿ, ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ,ರುದ್ರಪ್ಪ ಲಮಾಣಿ,ಬಾಯಕ್ಕ ಮೇಟಿ, ಕೆ ಪಿ ಸಿ ಸಿ ಅಪಸಂಖ್ಯಾತ ಘಟಕದ ಅಧ್ಯಕ್ಷ ಮೆಹಬೂಬ ಸೌದಾಗರ, ಮಲ್ಲು ಚರಂತಿಮಠ, ಕಂತಾ ಮೇಡಂ,ಸಂತೋಷ ಹೊಕ್ರಾಣಿ, ಆರ್. ಎಮ್. ಬಾಗವನ, ಶಿಖಂದರ ಗೊಳಸಂಗಿ, ಸೇರಿದಂತೆ ಎ ಪಿ ಎಮ್. ಸಿ. ಯ ಹಣ್ಣು ಹಂಪಲ ವರ್ತಕರ ಸಂಘದವರು ಹಾಜರಿದ್ದು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!