Ad imageAd image
- Advertisement -  - Advertisement -  - Advertisement - 

ಗೃಹಲಕ್ಷ್ಮಿ ಹಣದಿಂದ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿಸಿದ ಅಜ್ಜಿ 

Bharath Vaibhav
ಗೃಹಲಕ್ಷ್ಮಿ ಹಣದಿಂದ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿಸಿದ ಅಜ್ಜಿ 
WhatsApp Group Join Now
Telegram Group Join Now

ಚಿಕ್ಕೋಡಿ : ಮಹಿಳೆಯರಿಗೆ ಸಹಾಯವಾಗಲೆಂದು ರಾಜ್ಯ ಸರ್ಕಾರ ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯ ಹಣ ಸಾವಿರಾರು ಮಹಿಳೆಯರಿಗೆ ಸಹಾಯಕವಾಗಿದೆ.

ಕೆಲ ಕಡೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂಬ ಬಗ್ಗೆ ಗೊಂದಲಗಳು ನಡೆಯುತ್ತಿದ್ದು ಮತ್ತೊಂದಷ್ಟು ಕಡೆ ಮಹಿಳೆಯರು ಸರ್ಕಾರದ ಯೋಜನೆಯನ್ನು ಕೊಂಡಾಡಿರುವ ಉದಾಹರಣೆಗಳು ಸಿಗುತ್ತವೆ. ಸದ್ಯ ಇಲ್ಲೊಂದು ಅಜ್ಜಿ ತನಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ ತನಗೆ ಬಂದ ಹಣದಿಂದ ಊರಿಗೆಲ್ಲಾ ಊಟ ಹಾಕಿಸಿದ್ದಾರೆ.

ಸಿದ್ದರಾಮಯ್ಯನವರು ಪ್ರತಿ ತಿಂಗಳು ಎರಡು ಸಾವಿರ ಹಣ ನೀಡ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article
error: Content is protected !!