ಬೆಂಗಳೂರು: ಅದೆಷ್ಟೋ ಬಸ್ ಪ್ರಯಾಣಿಕರಿಗೆ ಎಲೆ ಅಡಿಕೆ, ಗುಟ್ಕಾ, ಪಾನ್ ಹಾಕುವ ದುರಭ್ಯಾಸವಿರುತ್ತದೆ. ಸಾಲದ್ದಕ್ಕೆ ಬಸ್ ಕಿಡಕಿಯಿಂದ ತಲೆ ಹೊರಗೆ ಹಾಕಿ ಆಗಾಗ ಉಗುಳುವ ಅಭ್ಯಾಸವೂ ಇರುತ್ತದೆ.
ಹೀಗೆ ಚಲಿಸುತ್ತಿದ್ದ ಬಸ್ ನಲ್ಲಿ ಕಿಟಕಿಯಿಂದ ತಲೆ ಹೊರಗೆ ಹಾಕಿ ಉಗುಳಲು ಹೋಗಿ ಮಹಿಳೆಯೊಬ್ಬಳು ಪೇಚಿಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಕಿಯಿಂದ ತಲೆ ಹೊರಗೆ ಹಾಕಿ ಉಗುಳಲು ಹೋಗಿದ್ದು, ಮಹಿಳೆಯ ತಲೆ ಕಿಟಕಿಯಲ್ಲಿ ಲಾಕ್ ಆಗಿ ಫಜೀತಿಗೆ ಸಿಲುಕಿದ್ದಾರೆ.
ಕಿಟಕಿಯ ಜಾಗ ಇಕ್ಕಟ್ಟಿನ ಸಣ್ಣ ಜಾಗವಾದ್ದರಿಂದ ಕಿಟಕಿ ಹಾಗೂ ಗ್ಲಾಸ್ ನಡುವೆ ಸಿಲುಕಿಕೊಂಡಿದೆ. ಕಿಟಕಿಯ ಗಾಜು ಪೂರ್ತಿ ತೆರೆಯಲು ಸಾಧ್ಯವಾಗದೇ ತಲೆ ಸಿಕ್ಕಿಸಿಕೊಂಡು ಮಹಿಳೆ ಅರ್ಧಗಂಟೆ ಪರದಾಡಿದ್ದಾರೆ.
ಬಳಿಕ ವಿಷಯ ತಿಳಿಯುತ್ತಿದ್ದಂತೆ ಬಸ್ ನಿಲ್ಲಿಸಿದ ಬಸ್ ಚಾಲಕ ಹಾಗೂ ನಿರ್ವಾಹಕರು ಸಹಾಯಕ್ಕೆ ಬಂದಿದ್ದು, ಹರಸಾಹಸಪಟ್ಟು ಜಾಗರೂಕವಾಗಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.