ನವದೆಹಲಿ: ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನದ (Independence Day) ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ದೀಪಾವಳಿ ವೇಳೆಗೆ ಜಿಎಸ್‌ಟಿ (GST) ಹೊರೆ ಭಾರೀ ಇಳಿಕೆಯ ಸೂಚನೆ ನೀಡಿದ್ದಾರೆ.
ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹಲವು ವಸ್ತುಗಳ ಮೇಲೆ ತೆರಿಗೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದರಿಂದ ಹಲವು ಸರಕುಗಳ ಮೇಲಿನ ದರ ಕಡಿಮೆಯಾಗಲಿದೆ. ಜಿಎಸ್‌ಟಿ ತಿದ್ದುಪಡಿಯಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ.
ದೀಪಾವಳಿಗೆ ಜಿಎಸ್ ಸಂಬಂಧ ದೊಡ್ಡ ಗಿಫ್ಟ್ ನೀಡಲಿದ್ದೇವೆ. ಹಲವು ವಸ್ತುಗಳ ಮೇಲಿನ ತೆರಿಗೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಜನರಿಗೆ ತೆರಿಗೆ ಹೊರೆ ಬಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜಿಎಸ್‌ಟಿ ಕ್ರಾಂತಿಕಾರಕ ಬದಲಾವಣೆಯಿಂದ ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಯುವ ಜನತೆಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ಘೋಷಿಸಿದ್ದಾರೆ. ಯುವಕರಿಗೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ವಿಕಸಿತ ಭಾರತ ರೋಜಾರ್ ಯೋಜನೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.
ಇನ್ನು 2025 ರ ಅಂತ್ಯದ ವೇಳೆಗೆ ಭಾರತ ತನ್ನದೇ ಆದ ಸೆಮಿಕಂಡಕ್ಟರ್ ಚಿಪ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ. ಸೆಮಿಕಂಡಕ್ಟರ್ ವಲಯದ ಮೇಲೆ ಕೇಂದ್ರೀಕರಿಸಿದ ಪ್ರಧಾನಿ ಮೋದಿ, ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಲ್ಪನೆಯನ್ನು 50-60 ವರ್ಷಗಳ ಹಿಂದೆ ಚರ್ಚಿಸಲಾಗಿದ್ದರೂ, ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿದ ಮೋದಿ, ಇಂದು, ಯುವ ವಿಜ್ಞಾನಿಗಳು, ಪ್ರತಿಭಾನ್ವಿತ ಯುವಕರು, ಎಂಜಿನಿಯರ್‌ಗಳು, ವೃತ್ತಿಪರರು ಮತ್ತು ಸರ್ಕಾರದ ಎಲ್ಲಾ ಇಲಾಖೆಗಳು ನಮ್ಮದೇ ಆದ ಮೇಡ್ ಇನ್ ಇಂಡಿಯಾ ಫೈಟರ್ ಜೆಟ್‌ಗಳಿಗೆ ನಮ್ಮದೇ ಆದ ಜೆಟ್ ಎಂಜಿನ್‌ಗಳನ್ನು ಹೊಂದಿರಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಇದರೊಂದಿಗೆ ಸಮುದ್ರದಲ್ಲಿ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹೊರತೆಗೆಯುವತ್ತ ಗಮನಹರಿಸುವ ‘ಸಮುದ್ರ ಮಂಥನ’ ಉಪಕ್ರಮದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ನಾವು ಈಗ ಸಮುದ್ರ ಮಂಥನದತ್ತ ಸಾಗುತ್ತಿದ್ದೇವೆ.
ಇದನ್ನು ಮುಂದುವರಿಸಿಕೊಂಡು, ಸಮುದ್ರದಲ್ಲಿ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹುಡುಕಲು ನಾವು ಕೆಲಸ ಮಾಡಲು ಬಯಸುತ್ತೇವೆ. ಆದ್ದರಿಂದ, ಭಾರತವು ರಾಷ್ಟ್ರೀಯ ಆಳವಾದ ನೀರಿನ ಪರಿಶೋಧನಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.




