ಹೈದರಾಬಾದ್: ಯುಪಿಐ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು ಎಂಬ ವರದಿಗಳನ್ನು ಕೇಂದ್ರ ನಿರಾಕರಿಸಿದೆ. ಎರಡು ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲು ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂಬ ವರದಿ ಸಂಪೂರ್ಣವಾಗಿ ಅವಾಸ್ತವಿಕವಾಗಿದ್ದು, ಅದು ಸುಳ್ಳು ಎಂದು ಹೇಳಿದೆ.
ಯುಪಿಐ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ಇರಲ್ಲ.. ಇರಲ್ಲ: ಇದೇ ವೇಳೆ, ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ವ್ಯಕ್ತಿಗಳು ಮತ್ತು ವ್ಯಾಪಾರಿಗಳಿಂದ UPI ಪಾವತಿಗಳಿಗೆ ಯಾವುದೇ ವ್ಯಾಪಾರಿ ರಿಯಾಯಿತಿ ದರ (MDR) ಶುಲ್ಕ ಇರುವುದಿಲ್ಲ. ಆದರೆ, ಅಂತಹ ವಹಿವಾಟುಗಳ ಮೇಲೆ ಯಾವುದೇ GST ಇರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆಧಾರ ರಹಿತ ಸುದ್ದಿಗಳನ್ನು ನಂಬಬೇಡಿ ಎಂದು ಕೇಂದ್ರದ ಮನವಿ: ಯುಪಿಐ ಪಾವತಿಗೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ವೆಬ್‌ಸೈಟ್‌ಗಳಲ್ಲಿ ಆಗುತ್ತಿರುವ ಪ್ರಚಾರವಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ಆಧಾರರಹಿತ ಮಾಹಿತಿಯನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜಿಎಸ್ಟಿ ವಿಧಿಸುವ ಯಾವುದೇ ಚಿಂತನೆ ಕೇಂದ್ರದ ಮುಂದಿಲ್ಲ: ಯುಪಿಐ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸುವ ಯಾವುದೇ ಚಿಂತನೆ ಕೇಂದ್ರದ ಮುಂದೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ. UPI ಮೂಲಕ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಉತ್ತೇಜಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಮಗದೊಮ್ಮೆ ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ 260.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯುಪಿಐ ವಹಿವಾಟು ನಡೆಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.