————————ಜಾವೇದ ಮುಲ್ಲಾ ಆಂಧ್ರಪ್ರದೇಶ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿ
ಗೋಕಾಕ : ಕಾಂಗ್ರೆಸ್ಸ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಗೋಕಾಕದ ಹಾಜಿ ಜಾವೇದ ಮುಲ್ಲಾ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಆಂದ್ರಪ್ರದೇಶದ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಹ ಉಸ್ತುವಾರಿ ನೀಡಿ ಹೊಸ ಜವಾಬ್ದಾರಿ ನೀಡಿದೆ.

ಹಾಜಿ ಜಾವೀದ್ ಮುಲ್ಲಾ ಇವರು ತಮ್ಮ ಮನೆ ದೇವರಾದ ಮಹಾರಾಷ್ಟ್ರಾದ ಮಿರಜನಲ್ಲಿರುವ ಹಜರತ್ ಖಾಜಾ ಶಮ್ನಾ ಮೇರಾ ದರ್ಗಾಕೆ ಬೇಟಿ ನೀಡಿ ದೇವರಿಗೆ ಚಾದರ ಹೊದಿಸಿ ಜವಾಬ್ದಾರಿ ನಿಬಾಯಿಸುವ ಶಕ್ತಿ ನೀಡಲು ಬೇಡಿಕೊಂಡರು.
ಹಾಜಿ ಜಾವೀದ ಮುಲ್ಲಾ ಇವರಿಂದ ಸನ್ಮಾನ ಸ್ವೀಕರಿಸಿದ ದರ್ಗಾದ ಖಾದೀಮಗಳು ಹಾಜಿ ಜಾವೀದ ಮುಲ್ಲಾರನ್ನು ಸನ್ಮಾನಿಸಿ ಶುಭಾಶಯ ತಿಳಿಸಿ ಕಾಂಗ್ರೆಸ್ ಪಕ್ಷ ತಮಗೆ ನೀಡಿದ ಜವಾಬ್ದಾರಿಯಿಂದ ಹುದ್ದೆ ನಿಬಾಯಿಸಿಕೊಂಡು ಹೊಗಲು ಆಶಿರ್ವದಿಸಿದರು.
ಇನ್ನು ಆಂದ್ರಪ್ರದೇಶ ರಾಜ್ಯದ ಅಲ್ಪಸಂಖ್ಯಾತರ ಸಹ ಉಸ್ತುವಾರಿಯಾಗಿ ನೇಮಕಗೊಂಡ ಹಾಜಿ ಜಾವೀದ ಮುಲ್ಲಾ ಇವರಿಗೆ ಮಿರಜನ ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿಯ ಎಮ್,ಎಲ್,ಸಿ, ಇಂದ್ರೀಸ್ ಇಲಿಯಾಸ್ ನಾಯಿಕವಾಡಿ ಇವರು ಸಿಹಿ ತಿನಿಸಿ ಅದ್ದೂರಿಯಾಗಿ ಸನ್ಮಾನಿಸಿದರು.
ನಂತರ ಮಿರಜನ ಗಾಂದಿ ಚೌಕನಲ್ಲಿನ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಜಾವೀದ ಮುಲ್ಲಾ ಇವರನ್ನು ಹೆಗಲ ಮೇಲೆ ಹೊತ್ತು ಬೀದಗಳಲ್ಲಿ ಜೈಕಾರ ಕುಗೂತ್ತಾ ಸುತ್ತಾಡಿ ಪಟಾಕಿ ಹಚ್ವಿ ಸಿಹಿ ಹಂಚಿ ಸಂಬ್ರಮಿಸಿದರು.
ಈ ಸಂದರ್ಭದಲ್ಲಿ ಮಿರಜ ಮಹಾನಗರ ಪಾಲಿಕೆಯ ಸದಸ್ಯ ಅಬಿಜಿತ ಹರಗೆ, ಶಿವಾಜಿ ದುರ್ವೆ, ಸಲೀಮ ಮುಶ್ರೀಕ, ಸಲಿಮ ಮುಲ್ಲಾ,ಅರಬಾಜ ಖಾಜಿ,ಹಸಿಮಕೇರ,ದಸ್ತಗೀರ ಖಾಜಿ ,ಮಂಜುರ ಶಮಶೇರ ಸೇರಿದಂತೆ ಇನ್ನುಳಿದವರು ಹಾಜಿ ಜಾವೇದ ಮುಲ್ಲಾ ಇವರಿಗೆ ಸಾಥ ನೀಡಿದರು.
ಮನೋಹರ ಮೇಗೇರಿ




