Ad imageAd image

ಗ್ಯಾರಂಟಿ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು :ಎನ್ ವೈ ಪಿ ಚೇತನ್

Bharath Vaibhav
ಗ್ಯಾರಂಟಿ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು :ಎನ್ ವೈ ಪಿ ಚೇತನ್
WhatsApp Group Join Now
Telegram Group Join Now

ಮೊಳಕಾಲ್ಮೂರು :ಕಾಂಗ್ರೆಸ್ ಸರ್ಕಾರವು ನೀಡಿದ ಪಂಚ ಗ್ಯಾರಂಟಿ ಯೋಜನಯನ್ನು ರಾಜ್ಯದ ಪ್ರತಿ ವ್ಯಕ್ತಿಗೆ ಮುಟ್ಟಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಎನ್ ವೈ ಪಿ ಚೇತನ್ ರವರು ತಾಲೂಕಿನ ತಮ್ಮೆನಹಳ್ಳಿ ಗ್ರಾಮದಲ್ಲಿ ಇಂದು ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಉದ್ಘಾಟನೆ ಮಾಡಿ ಇವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬ ಜನತೆಯು ಬಳಸಿಕೊಂಡರೆ ಉತ್ತಮ . ಇಂದು ಅನೇಕ ಕಡು ಬಡ ಜನರಿಗೆ ಈ ಪಂಚ ಗ್ಯಾರಂಟಿ ಯೋಜನೆಯಿಂದಆರ್ಥಿಕವಾಗಿ ಬೆಳೆಯಲು ದಾರಿ ಮಾಡಿ ಕೊಟ್ಟಿದೆ. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಯಾವುದೇ ಲೋಪ ದೋಷ ಕಂಡು ಬಂದಲ್ಲಿ ಅಧಿಕಾರಿಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳಿಗೆ ಪರಿಸ್ಕಾರ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರು ನಂದೀಶ್ ಮಾತನಾಡಿ ಭಾರತ ದೇಶದಲ್ಲಿ ಕರ್ನಾಟಕ ಸರ್ಕಾರ ನೀಡಿದ ಈ ಪಂಚ ಯೋಜನೆಗಳು ಪ್ರಥಮ ಎನ್ನುತ್ತೇವೆ. ಇಂತಹ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕರು ಬಳಸಿ ಕೊಳ್ಳಬೇಕು. ಗ್ಯಾರಂಟಿ ಯೋಜನೆ ಪಡೆಯುವಲ್ಲಿ ಯಾವುದೇ ಲೋಪ ದೋಷ ಕಂಡು ಬಂದಲ್ಲಿ ನಿಮ್ಮ ಊರುಗಳಿಗೆ ನಮ್ಮ ಪಂಚ ಗ್ಯಾರಂಟಿ ಯೋಜನೆಯ ಅಧಿಕಾರಿಗಳು ಬಂದಿರುತ್ತಾರೆ, ಇವರ ಮಾರ್ಗದರ್ಶನ ದಲ್ಲಿ ಸರ್ಕಾರ ನೀಡಿದ ಯುವ ನಿಧಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ತಮ್ಮೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಪಾರ್ವತಮ್ಮ ವೀರಣ್ಣ, ಸಿ ಡಿ ಪಿ ಓ ವಿನಯ್ ಕುಮಾರ್, ಆಹಾರ ಇಲಾಖೆ ಗೀತಾoಜಲಿ, ಯುವ ನಿಧಿ ಯೋಜನೆ ಅಧಿಕಾರಿ ಬಸವರಾಜ್, ಬೆಸ್ಕಾಂ ಆಧಿಕಾರಿ ಹನುಮಂತರೆಡ್ಡಿ, ತಾಲ್ಲೂಕಿನ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರು ಧನಂಜಯ, ಗ್ಯಾರಂಟಿ ಯೋಜನೆ ಸದಸ್ಯರುಗಳಾದ ನರಸಿಂಹ ರೆಡ್ಡಿ, ಇಸ್ಮಾಯಿಲ್, ಹೊನ್ನೂರಪ್ಪ ಗೋವಿಂದಪ್ಪ, ಹನುಮಂತರೆಡ್ಡಿ, ಸಿದ್ದಬಸಣ್ಣ, ಶಿವರುದ್ರಪ್ಪ ಈಶ್ವರಪ್ಪ, ಗ್ರಾಮ ಪಂಚಾಯತಿಸದಸ್ಯರುಗಳಾದ ಗೀತಾ ಹನುಮಕ್ಕ, ಉಮಾ ರೆಡ್ಡಿ, ಪೆನ್ನಯ್ಯ, ಪಿ ಡಿ ಓ ಗಳಾದ ಬಾಂಡ್ರವಪ್ಪ ಗುಂಡಪ್ಪ, ಮಲ್ಲಿಕಾರ್ಜುನ, ಕುಮಾರ್ ಸ್ವಾಮಿ, ಯಶ್ವನಂಥಪ್ಪ, ನೂರುಲ್ಲ, ನಂದೀಶ್ ವ್ಯವಸ್ಥಾಪಕರು, ಜಗದೀಶ್, ಟಿ ಡಿ ವೀರಣ್ಣ, ಅಂಗನವಾಡಿ ಕಾರ್ಯಕರ್ತೆರು ಆಶಾ ಕಾರ್ಯಕರ್ತೆರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ: ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!