ಐನಾಪುರ :ವಿಶ್ವದಲ್ಲಿ ಶಾಂತಿ, ಅಶಾಂತಿ ಗಳ,ಧರ್ಮ ಅಧರ್ಮಗಳ ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೇರೆದಾಟ ಮಾಡುವಾಗ ಮನುಕುಲ ಉದ್ಧಾರಕ್ಕಾಗಿ ಧರೆಗೆ ಅವತರಿಸಿ ಸಾಧಾರಣ ಜೀವನದಲ್ಲಿ ಸುಧಾರಣೆ ತರಲು ನಾಡಿನ ಜನರ ಅಜ್ಞಾನ ಅಳಸಿ ಸುಜ್ಞಾನ ತೋರಿದ ಮಹಾನ ಸಂತ ತಪಸ್ವಿ ಶರಣರ ನಾಡು ನಮ್ಮ ಕರ್ನಾಟಕ ಅಂತಹ ನಾಡಿನ12 ಶತಮಾನದ ಸಾಲಿನಲ್ಲಿ ಬರುವ , ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮದೇವಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ನೆಲೆಸಿದ ದಾನಮ್ಮ ಭಕ್ತರ ಪಾಲಿನ ವರದಾನಿ. ಅಂತಹ ಮಹಾನ ದೇವತೆ .ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಮಲ್ಲಯ್ಯಾ ಮಳಮಠ ಅವರ ಸುಪುತ್ರ ನಾಗಯ್ಯ ಮಳಮಠ ದೇವಿಯನ್ನು 8 ವರ್ಷದಿಂದ ಆರಾಧನೆ ಮಾಡುತ್ತಾ ದೇವಿಯ ಕೃಪಾಶಿರ್ವಾದ ಅವರ ಮೇಲೆ ಆಗಿ ದೇವಿಯು ನಿನ್ನು ನನ್ನ ನು ಮನೆಯಲ್ಲಿ ಪೂಜೆ ಮಾಡು ಎಂದು ದೈವವಾಣಿ ಆದಾಗ ಅದೇರೀತಿ ಮನೆಯಲ್ಲಿ ದೇವತೆ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಾ ಬೇಡಿ ಬಂದ ಭಕ್ತರಿಗೆ ದೇವಿ ಅಂಗಾರ ನೀಡಿ .ಸ್ಥಳದಲ್ಲೇ ಹಲವಾರು ಪವಾಡಗಳನ್ನು ಮಾಡುತ್ತಾ ಯಾವುದೇ ಜಾತಿ ಧರ್ಮ ಎನ್ನದೆ ಕಷ್ಟ ಅಂತಾ ಬಂದಾಗ ದೇವಿ ಅಂಗಾರ ನೀಡಿ ಕೆಲವೊಂದು ಆಯುರ್ವೇದ ಔಷಧ ಕೊಟ್ಟು ಪರಿಹರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐನಾಪುರ ಪಟ್ಟಣದಲ್ಲಿ ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವ 22ನೇ ವಾರ್ಷಿಕೋತ್ಸವದ ಹಮ್ಮಿಕೊಂಡಿದ್ದು

ಜಾತ್ರಾ ನಿಮಿತ್ಯ ಕುಂಕುಮಾರ್ಚನೆ ರುದ್ರಾಭಿಷೇಕ, ಸಕಲ ವಾದ್ಯಗಳೊಂದಿಗೆ ಮುತೈದೆಯರು ಊರಿನ ಪ್ರಮುಖ ಬೀದಿಗಳಲ್ಲಿ ಕುಂಭ ಆರತಿಗಳೊಂದಿಗೆ ಮೆರವಣಿಗೆ ಸಂಚರಿಸಿ ದೇವಿಯ ಮಂದಿರಕ್ಕೆ ತಲುಪಿತು ಸಂಜೆ 8 ಗಂಟೆಗೆ ಮಕ್ಕಳಿಂದ ಸಾಂಸ್ಕೃತಿಕ ಹಾಗು ಕಾರ್ಯಕ್ರಮಗಳು ನೆರವೇರುವದು. ಗುರುವಾರ ಮುಂಜಾನೆ 8ಗಂಟೆಗೆ ಮಹಾಭಿಷೇಕ ಮತ್ತು ಮಂಗಳಾರತಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂತಾನ ರಹಿತ ಮಹಿಳೆಯರಿಂದ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ವಿವಾಹ ಇಲ್ಲದವರಗೆ ಕಂಕಣ ಕಟ್ಟಿಸಿಕೊಳ್ಳುವ ಕಾರ್ಯಕ್ರಮ, ಜರುಗುವದು.
ದಾನಮ್ಮದೇವಿಗೆ ಮಹಾಪೂಜೆ, ಮಹಾಪ್ರಸಾದ ಜರುಗಲಿದೆ ಎಂದು ಶ್ರೀ ದಾನಮ್ಮದೇವಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗಯ್ಯ ಮಲ್ಲಯ್ಯಾ ಮಳೆಮಠ ತಿಳಿಸಿದರು.
ವರದಿ :ಮುರಗೇಶ ಗಸ್ತಿ




