Website Designed By | KhushiHost | Latest Version 8.1 | Need A Similar Website? Contact Us Today: +91 9060329333, 9886068444 | info@khushihost.com | www.khushihost.com| Proudly Hosted By KhushiHost | Speed And Performance | 10 vCPU | 60 GB RAM | Powerful Cloud VPS Server |
ಹಲ್ಯಾಳ : ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನೇ ಧಾರೆ ಎಳೆಯುತ್ತಿರುವ ಅತಿಥಿ ಶಿಕ್ಷಕರಿಗೆ ಕೇವಲ 2000 ರೂ ವೇತನ ಹೆಚ್ಚಿಸಿ ಆಸೆ ಹಚ್ಚಿದ್ದಾರೆ. ಸರಕಾರ ಪ್ರತಿ ಮಗುವಿಗೆ ಖರ್ಚು ಮಾಡುವ ಹಣಕ್ಕೆ ಶಿಕ್ಷಕರ ವೇತನ ಸರಿ ಸಮಾನ ಇದ್ದಂತ್ತಿದೆ. ನಮ್ಮ ಗೋಳು ಯಾರು ಆಲಿಸುವರು.
ಈಗ ಶಾಸಕರು ಯಾವುದೇ ಚರ್ಚೆಗಳಿಲ್ಲದೆ ತಮಗೆ ಬೇಕಾದ ವೇತನವನ್ನು ದ್ವಿಗುಣ, ದ್ವಿಗುಣಕ್ಕಿಂತಲೂ ಹೆಚ್ಚು ನಿಗದಿಪಡಿಸಿ ಅನುಮೋದಿಸಿದ್ದು ಎಷ್ಟು ಸರಿ ಎಂದು ಭಾವನಾತ್ಮಕವಾಗಿ ಕಣ್ಣು ಚಿಮ್ಮುತ್ತಿದ್ದಾರೆ.
ಒಬ್ಬ ಅಪರಾಧಿ ಮಾಡಿದ ಕೃತ್ಯಗಳಿಗೂ ಅನುಭವದ ಆಧಾರದ ಮೇಲೆ ವೇತನ ನಿಗದಿ ಮಾಡುತ್ತೀರಿ. ಅತಿಥಿ ಶಿಕ್ಷಕರ ಕಂಡರೆ ಯಾಕೆ ಈ ತಾತ್ಸಾರ.
ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹೆಚ್ಚಳದ ಎರಡು ತಿದ್ದುಪಡಿ ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಶುಕ್ರವಾರ ಅನುಮೋದನೆ ನೀಡಿದರು.
ವಿಧೇಯಕಕ್ಕೆ ತಿದ್ದುಪಡಿಯಿಂದಾಗಿ ಶಾಸಕರ ವೇತನ 40 ಸಾವಿರ ರೂ .ನಿಂದ 80 ಸಾವಿರಕ್ಕೆ ಹೆಚ್ಚಳ. ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರೂ .ನಿಂದ 1.25 ಲಕ್ಷ ರೂ , ಮುಖ್ಯಮಂತ್ರಿ ವೇತನ 75 ಸಾವಿರ ರೂ .ನಿಂದ 1.50 ಲಕ್ಷ ರೂ , ಸಚಿವರ ವೇತನ 60 ಸಾವಿರ ರೂ .ನಿಂದ 1.25 ಲಕ್ಷ ರೂ .ವರೆಗೆ ಹೆಚ್ಚಳವಾಗಲಿದೆ.
ಈ ವೇತನ ಹೆಚ್ಚಿಸಿದ್ದು ಸರ್ಕಾರಕ್ಕೆ ಹೊರೆಯಾಗಲಿಲ್ಲವೇ.
ಮುಂದಿನ ಬಜೆಟ್ ನಲ್ಲಿ ಕನಿಷ್ಠ 20 ಸಾವಿರ ರೂ ವೇತನ ನಿಗದಿಸದೆ ಇದ್ದಲ್ಲಿ ನಾವು 43ಸಾವಿರ ಅತಿಥಿ ಶಿಕ್ಷಕರು ಹುದ್ದೆ ತೊರೆದು ಮುಖ್ಯಮಂತ್ರಿ ಅವರ ಕಛೇರಿ ಮುಂದೆ ಅನಿರ್ದಿಷ್ಟವಧಿ ಹೋರಾಟಕ್ಕೆ ಸಿದ್ಧ.- ಚಿತ್ರಲೇಖ ಕೆ. (ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು)
ಚಿತ್ರಲೇಖ ಕೆ.
ಈ ರಾಜಕೀಯ ಪಕ್ಷಗಳು ಶಾಸಕರ ಚೇತನ ಭತ್ಯೆ ಇನ್ನಿತರ ಸೌಲಭ್ಯಗಳನ್ನು ಯಾವುದೇ ಜನ ಅಭಿಪ್ರಾಯ ಕೇಳದೆ 50 ಪರ್ಸೆಂಟ್ ಹೆಚ್ಚಿಗೆ ಮಾಡಿದ್ದು ಇದೊಂದು ದುರಂತ. ಈ ಪ್ರಜಾಪ್ರಭುತ್ವ ಮರೆಯಾಗಿ ರಾಜ್ಯ ಪ್ರಭುತ್ವ ಆಡಳಿತ ನಡೆಯುತ್ತಿದೆ, ಇವರು ಜನಸೇವೆ ಮಾಡುತ್ತೇನೆ ಎಂದು ಹೇಳಿ ರೈತರ ಬೆಂಬಲ ಬೆಲೆಗೆ ಯೋಜನೆ ಸರಕಾರಿ ನೌಕರರ ವೇತನ ಜಾರಿ ಮಾಡುವುದನ್ನು ಬಿಟ್ಟು ತಮ್ಮ ವೇತನವನ್ನು ಜಾರಿ ಮಾಡಿಕೊಂಡಿದ್ದಾರೆ ನಮ್ಮ ರಾಜ್ಯದ ದುರಂತ.- ಭರತೇಶ್ ಕುದುರಿ (ಸಾಮಾಜಿಕ ಹೋರಾಟಗಾರರು ಅಥಣಿ)
ಭರತೇಶ್ ಕುದುರಿ
ಅತಿಯಾದ ಬೆಲೆ ಏರಿಸಿದ್ದೀರಿ, ತೆರಿಗೆ ಹೆಚ್ಚಿಸಿದ್ದೀರಿ, ಈ ನಡುವೆ ಶಾಸಕ ಮಂತ್ರಿಗಳ ವೇತನ ಹೆಚ್ಚಿಸಿದ್ದಿರಿ ನೀವು ಹೇಳುತ್ತೀರಿ ಕಾಂಗ್ರೆಸ್ ರೈತರ ಸರ್ಕಾರ, ಬಡವರ ಸರ್ಕಾರ ಕಾರ್ಮಿಕರ ಸರ್ಕಾರ ಮತ್ತು ನೊಂದವರ ಸರಕಾರ ಎಂದು ಜನರನ್ನ ಯಾಮಾರಿಸುತ್ತೀದ್ದೀರಿ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಉತ್ತರ ನೀಡುತ್ತೇವೆ.- ಮಹಾದೇವ ಮಡಿವಾಳ ( ರೈತ ಸಂಘದ ತಾಲೂಕ ಅಧ್ಯಕ್ಷರು ಅಥಣಿ)