ಅಹ್ಮದಾಬಾದ್: ಸನ್ ರೈಜರ್ಸ್ ಹೈದರಾಬಾದ್ ವಿರುದ್ಧ 38 ರನ್ ಗಳ ಸುಲಭ ಗೆಲುವು ಪಡೆದುಕೊಂಡ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಹೋರಾಟದ ನಂತರವೂ ಸೋಲನುಭವಿಸಿದ ಸನ್ ರೈಜರ್ಸ್ ಹೈದರಾಬಾದ್ ಸ್ಥಿತಿ ಮತ್ತಷ್ಟು ಚಿಂತಾಜನಕವಾಯಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 224 ರನ್ ಗಳಿಸಿತು. ಪ್ರತಿಯಾಗಿ ಆಡಿದ ಸನ್ ರೈಜರ್ಸ್ ಹೈದರಾಬಾದ್ ತಂಡ 6 ವಿಕೆಟ್ ಗೆ 186 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಸ್ಕೋರ್ ವಿವರ:
ಗುಜರಾತ್ ಟೈಟನ್ಸ್ 6 ವಿಕೆಟ್ ಗೆ 224
ಸಾಯಿ ಸುದರ್ಶನ್ 48 ( 23 ಎಸೆತ, 9 ಬೌಂಡರಿ), ಶುಭಮಾನ್ ಗಿಲ್ 76 ( 38 ಎಸೆತ, 10 ಬೌಂಡರಿ, 2 ಸಿಕ್ಸರ್)
ಜೋಷ್ ಬಟ್ಲರ್ 64 ( 37 ಎಸೆತ, 3 ಬೌಂಡರಿ, 4 ಸಿಕ್ಸರ್) ಜಯದೇವ್ ಉನದ್ಕತ್ 35 ಕ್ಕೆ 3)
ಸನ್ ರೈಜರ್ಸ್ ಹೈದರಾಬಾದ್ 6 ವಿಕೆಟ್ ಗೆ 186
ಅಭಿಷೇಕ ಶರ್ಮಾ 74 ( 41 ಎಸೆತ, 4 ಬೌಂಡರಿ, 6 ಸಿಕ್ಸರ್), ಪ್ರಸಿದ್ದ ಕೃಷ್ಣ 19 ಕ್ಕೆ 2, ಮೊಹ್ಮದ ಸಿರಾಜ್ 33 ಕ್ಕೆ 2)
ಪಂದ್ಯ ಶ್ರೇಷ್ಠ: ಪ್ರಸಿದ್ಧ ಕೃಷ್ಣ




