ಮಹಿಳೆಯರ ಐಪಿಎಲ್ ಪಂದ್ಯಾವಳೀ: ಫೈನಲ್ ಖಚಿತಪಡಿಸಿಕೊಂಡ ಆರ್ ಸಿಬಿ
ಮುಂಬೈ: ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಗೇಂಟ್ಸ್ ತಂಡಗಳು ಇಂದು ನಡೆಯುವ ಮಹಿಳೆಯರ ಐಪಿಎಲ್ ಪಂದ್ಯಾವಳೀಯ ೧೯ ನೇ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪಂದ್ಯಾವಳಿಯಲ್ಲಿ ಈಗಾಗಲೇ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ೬ ಪಂದ್ಯಗಳನ್ನು ಗೆದ್ದು ೧೨ ಪಾಯಿಂಟ್ ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಫೈನಲ್ ಪ್ರವೇಶವನ್ನು ಖಚಿತಪಡಿಸಕೊಂಡಿದೆ.
ಇAದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಮುಂಬೈ ಇಂಡಿಯನ್ಸ್ ೬ ಪಾಯಿಂಟ್ ಗಳೊಂದಿಗೆ ೩ ನೇ ಸ್ಥಾನದಲ್ಲಿದೆ. ಗುಜರಾತ್ ಗೇಂಟ್ಸ್ ತಂಡ ೮ ಪಾಯಿಂಟ್ ಗಳೊಂದಿಗೆ ದ್ವಿತೀಯ ಸ್ಥಾಣದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ತಮ್ಮ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇಂದಿನ ಪಂದ್ಯದಲ್ಲ ಗೆಲ್ಲಲು ಯತ್ನಿಸಲಿವೆ.




