ಗುಳೇದಗುಡ್ಡ : ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಲಾಗಿ ಹಿಂದನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದು ಗುರುಸಿದ್ದೇಶ್ವರ ಮಠದ ಶ್ರೀ ಜ. ಗುರುಸಿದ್ದ ಪಟ್ಟದಾರ್ಯ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ೧೯೯೦-೯೭ನೇ ಬ್ಯಾಚಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹಸಮ್ಮೇಳ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮಿಗಳು ಸಾನಿದ್ಯ ವಹಿಸಿ ಮಾತನಾಡಿದರು, ನಿವೃತ್ತ ಶಿಕ್ಷಕಿಯರು ಸುಮತಿ ಹೆಗಡೆ, ಮಾತನಾಡಿ ಎಲ್ಲರನ್ನು ಒಂದುಗೊಡಿಸಿ ಕಾರ್ಯಕ್ರಮವನ್ನು ಮಾಡುವುದು ಸುಲಭವಲ್ಲ ತುಂಬಾ ಸಾಹಸದ ಕೆಲಸ ಮಾಡಿದ್ದೀರಿ. ಶಿಕ್ಷಕರನ್ನು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿರುವುದು ನಮಗೆ ತುಂಬಾ ಸಂತಸ ತಂದಿದೆ. ಈ ಹಿಂದೆ ನಾವೇಲ್ಲ ಶಿಕ್ಷಕರು ಕಠಿಣ ಶಿಕ್ಷೆ ನೀಡುತ್ತಲೇ ಶಿಕ್ಷಣ ನೀಡಿ ಅಷ್ಟೇ ಪ್ರೀತಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವು ಪಾಲಕರು ಸಹ ನಮಗೆ ಸಹಕಾರ ನೀಡುತ್ತಿದ್ದರು ಎಂದರು.
ನಿವೃತ್ತ ಶಿಕ್ಷಕಿಯರು ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಪರುಶುರಾಮ ಬಂತಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಬಳಗದ ವತಿಯಿಂದ ಸರಸ್ವತಿ ವಿದ್ಯಾ ಸಂಸ್ಥೆಯ ಶಾಲೆಗೆ ೫೦ ಸಾವಿರ ರೂ. ದೇಣಿಗೆಯಾಗಿ ನೀಡಿದರು.
ಕಲಿಸಿದ ಗುರುಗಳಾದ ಸುಮತಿ ಹೆಗಡೆ, ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಜಮುನಾ ಮಾದರ, ರಾಜೇಶ್ವರಿ ಕವಡಿಮಟ್ಟಿ, ಭಾರತಿ ತಾಂಡರು, ನಾಗರಾಜ ವಡ್ಡರ್, ಪೀಟರ್ ಬೆಟಗೇರಿ, ಶೇಖಮ್ಮ ಅÀವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರಿಂದ ಹಾಸ್ಯ ಕಾರ್ಯಾಕ್ರಮ ನಡೆಸಿದರು. ಶಿಕ್ಷಕರಾದ ವಿವೇಕಾನಂದ ದೇವಾಂಗಮಠ, ಎಮ್.ಎಸ್. ಶೀಪ್ರಿ, ಸಂಗಮೇಶ ಶೇಖಾ, ಭಾಗವಹಿಸಿದ್ದರು. ಶಿಲ್ಪಾ ಸತ್ತಿಗೇರಿ ಪ್ರಾರ್ಥಿಸಿದರು. ಸತೀಶ ಪತ್ತಾರ ಹಾಗೂ ಶರಣು ಮಲಗಾ ಸ್ವಾಗತಿಸಿದರು. ಅನಿಲ ತಾಂಡೂರ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಕವಿತಾ ಮಲಜಿ, ನಂದಿನಿ ರಾಜನಾಳ ನಿರೂಪಿಸಿದರು. ಮಹಾಲಿಂಗೇಶ ಯಂಡಿಗೇರಿ ವಂದಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಹಳೇ ವಿದ್ಯಾರ್ಥಿಗಳು ಈ ಕಾರ್ಯಾಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ಮಹಾಲಿಂಗೇಶ ಯಂಡಿಗೇರಿ