ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದಲ್ಲಿ ಇಂದು ಶ್ರೀ ಮ.ನಿ.ಪ್ರ ಶ್ರೀ ಮುರಗೇಂದ್ರ ಅಪ್ಪ ಗಳ ಗುರು ನಮನ ಕಾರ್ಯಕ್ರಮ ಅತ್ಯಂತ ಅದ್ಭುತವಾಗಿ ವಿರಕ್ತ ಮಠ ಬಸವನ ಬಾಗೇವಾಡಿಯಲ್ಲಿ ಜರುಗಿತು.
ಪ್ರಥಮವಾಗಿ ವಿರಕ್ತ ಮಠದಲ್ಲಿ ದಿ. ಮುರುಗೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜಾ ದಿಯಾಗಳನ್ನು ಮಾಡಿ ಮಂಗಳಾರತಿಯನ್ನು ಮಾಡಲಾಯಿತು.
ಶ್ರೀ ಮುರಗೇಂದ್ರ ಮಹಾ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ವಿರುಕ್ತ ಮತದೊಂದಿಗೆ ಪ್ರಾರಂಭವಾಯಿತು.
ಮೆರವಣಿಗೆಯು ಗಣೇಶ್ ಚೌಕದ ಮೂಲಕ ಚಿಂಚೋಳಿಯವರ ಓಣಿ ಅಂಬಾ ಭವಾನಿ ಗುಡಿ ಪಟ್ಟಣಶೆಟ್ಟಿ ಅವರ ಓಣಿ
ಬಸವ ಸ್ಮಾರಕ ಹಾರಿವಾಳ ಅವರ ಓಣಿ ಬಸವೇಶ್ವರ ಸರ್ಕಲ್ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿ ಪುನ.
ಮೆರವಣಿಗೆಯು ಅಗಸಿ ಮೂಲಕ ಆಗಮಿಸಿತು. ದಾರಿ ಉದ್ದಕ್ಕೂ ಶುಚಿ ಮಾಡಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು.
ಭಕ್ತಾದಿಗಳು ಗುರುಗಳಿಗೂ ಪುಷ್ಪವೃಷ್ಟಿ ಗೈ ದರು. ಮೆರವಣಿಗೆಯಲ್ಲಿ ಡೊಳ್ಳು. ಹಲಗೆ ಮಜಲು ಹಾಗೂ ಇತರ ವಾದ್ಯಗಳು ಸಮ್ಮೇಳನಗೊಂಡಿದ್ದವು.
ನಂತರ ವಿರಕ್ತ ಮಠದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಅನೇಕ ಗ್ರಾಮಗಳಿಂದ ವಿರಕ್ತಮಠ ಹಾಗೂ ಹಿರೇಮಠದ ಪೂಜ್ಯರು ಆಗಮಿಸಿ ವೇದಿಕೆಯನ್ನು ಅಲಂಕರಿಸಿದ್ದರು. ಶ್ರೀ ಶಿವಾನಂದ್ ಪಾಟೀಲ್ ಅವರ ಮಗನಾದ ಶ್ರೀ ಸತ್ಯಜಿತ್ ಎಸ್ ಪಾಟೀಲ್ ಆಗಮಿಸಿದ್ದರು. ಶ್ರೀ ಈರಣ್ಣ ಪಟ್ಟಣಶೆಟ್ಟಿ ನಿರ್ದೇಶಕರು ಸಹಕಾರ ಮಂಡಳಿ ಇವರು ಪೂಜ್ಯರ ಕುರಿತು ಮಾತನಾಡಿದರು. ಶ್ರೀ ಶಿವಪ್ರಕಾಶ್ ಹಿರೇಮಠ್ ಬಸವನಬಾಗೇವಾಡಿ ಇವ್ರು ಶ್ರೀ ಮುರಗೇಂದ್ರ ಸ್ವಾಮೀಜಿ ಕುರಿತು ಮಾತನಾಡಿದರು. ಆರು ತಿಂಗಳ ಕಾಲ ಬಸವ ಪ್ರವಚನ ಮಾಡಿ ಪ್ರವಚನ ಭಾಸ್ಕರ ಎಣಿಸಿಕೊಂಡಿದ್ದರು. ವಿರಕ್ತಮಠವನ್ನ ಬೆಳೆಸಲು ಹಾಗೂ ತಮ್ಮ ಪ್ರವಚನಗಳಿಂದ ನಾಡಿಗೆ ಹೆಸರಾಗಿದ್ದರು. ಶ್ರೀ ಶಿವನಗೌಡ ಬಿರಾದಾರ್ ಶ್ರೀ ಬಿಕೆ ಕಲ್ಲೂರು ವಕೀಲರು ಶ್ರೀ ಸುರೇಶ್ ಹಾರಿವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅನೇಕ ಪೂಜ್ಯರು ಶ್ರೀ ಮುರಗೇಂದ್ರ ಮಹಾಸ್ವಾಮಿಗಳ ಕುರಿತು ಮಾತನಾಡಿ ಗುರು ನಮನ ಸಲ್ಲಿಸಿದರು.
ಗ್ರಾಮದ ಮಹಿಳೆಯರು ಯುವಕರು ಗುರುಹಿರಿಯರು ಗುರು ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆ ಹಾಗೂ ವಿದ್ಯಾರ್ಥಿನಿಯರ ಭಕ್ತಿಗೀತೆಯ ನಾಟ್ಯ ಮನಸೂರೆಗೊಂಡಿತು.
ಭಕ್ತರಿಗಾಗಿ ಪ್ರಸಾದ ಏರ್ಪಡಿಸಲಾಗಿತ್ತು. ಶ್ರೀ ಮಠದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ತನು ಮನ ಧನ ಸಹಕಾರ ನೀಡಿ ಉತ್ಸಾಹದಿಂದ ಗುರು ನಮನ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣೀಭೂತರಾದರು.
ಶ್ರೀ ಎಂ.ಜಿ . ಆದಿಗೊಂಡ ಶಿಕ್ಷಕರು ಎಂಬಿ ತೋಟದ ಶ್ರೀ ಎಸ್ ಎಸ್ ಝಳಕಿ ಎಫ್ ಡಿ ಮೇಟಿ ಬಸವರಾಜ ಹಾರಿವಾಳ ಅಗರವಾಲ
ಪಟ್ಟಣದ ಗಣ್ಯಮಾನ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಭಾರಿಕಾಯಿ ಗುರುಗಳು ನಿರೂಪಿಸಿದರು. ಸಂಗನಗೌಡ ಚಿಕ್ಕೊಂಡ್ ಸ್ವಾಗತ ನೆರವೇರಿಸಿದರು.