ಹುಮನಾಬಾದ:-ಚೆಂಡು ಹೂವಿನ ಬೆಳೆ ಬೆಳೆಯುವದರಿಂದ ರೈತರಿಗೆ ಅಧಿಕ ಲಾಭ ಸಿಗಲಿದೆ ಎಂದು ಗುರು ಸಂಗಮೇಶ ತಿಳಿಸಿದರು.ಬಸವಕಲ್ಯಾಣ ತಾಲ್ಲೂಕಿನ ಗೋಗಾ ಗ್ರಾಮದಲ್ಲಿ ಬುಧವಾರ ಆರಡೊರ ಸಿಡ್ಸ್ ವತಿಯಿಂದ ಹಮ್ಮಿಕೊಂಡಿದ್ದ ಡ್ರಿಮ್ ಎಲ್ಲೊ ಚೆಂಡು ಹೂವಿನ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ರೈತರನ್ನ ಉದ್ದೇಶಿಸಿ ಮಾತನಾಡಿದರು.
ಡ್ರಿಮ್ ಎಲ್ಲೊ ತಳಿಯ ಚಂಡು ಹೂವು ಒಂದು ಎಕ್ಕರೆಯಲ್ಲಿ ಸರಿಸುಮಾರು 6 ರಿಂದ 8 ಟನ್ ಹೂವು ಬೆಳೆಯಬಹುದಾಗಿದೆ.ಕಡಿಮೆ ವೆಚ್ಚದಲ್ಲಿ ಸಿಗುವ ಈ ತಳಿಯಿಂದ ರೈತರು ಉತ್ತಮ ಬೆಳೆ ಬೆಳದು ತಮ್ಮ ಆರ್ಥಿಕ ಸ್ಥಿತಿಯನ್ನ ಉತ್ತಮ ಮಾಡಿಕೊಳ್ಳಲು ಈ ಚೆಂಡು ಹೂವಿನ ಬೇಸಾಯ ಮಾಡಬೇಕು.ಒಂದು ಎಕ್ಕರೆ ಬೆಳೆಯಿಂದ ಅಂದಾಜು ನಾಲ್ಕರಿಂದ ಐದು ಲಕ್ಷ ಆದಾಯವನ್ನ ರೈತರು ಗಳಿಸಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಿಗೆ ಸನ್ಮಾನಿಸಿ ಗೌರವ ಕೂಡ ನೀಡಲಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಪ್ರೊಫೆಸರ್ ಅನುರಾಧ ಆರ್.ವಡಗಾವೇ,ಪ್ರೊಫೆಸರ್ ಡಾ.ಅರವಿಂದ್ ಕುಮಾರ್,ಪವನ್ ಕುಮಾರ್ ಪಾಟೀಲ,ಪವನ್ ಕುಮಾರ ಜಬಾಡೇ ಸೇರಿದಂತೆ ಪ್ರಗತಿ ಪರ ರೈತರು ತೋಟಗಾರಿಕೆ ವಿದ್ಯಾಲಯದ ವಿದ್ಯಾರ್ಥಿಗಳು, ಊರಿನ ಮುಖಂಡರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್