ಅಥಣಿ : ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಶ್ರೀ ಗುರುವೇ ನಮಃ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಮತ್ತು ಜ್ಞಾನೋದಯದ ಬೆಳಕು ನೀಡಿದ ಗುರು ಅವನೇ ನಿಜವಾದ ಶಿಕ್ಷಕ ಎಂದರು ಗುರು ಶಿಷ್ಯರ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಉಳಿಯುವಂತೆ ತಾವೆಲ್ಲರೂ ಮಾಡಿದಿರಿ ಗುರು ಶಿಷ್ಯರ ಸಂಬಂಧ ಹೀಗೆ ಇರಲಿ ಎಂದು ಪರಮಪೂಜ್ಯ ಶ್ರೀ ಅಮರೇಶ್ವರ ಮಹಾರಾಜರು ಶುಭ ಹಾರೈಸಿದರು.
ಅವರು ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ರವಿವಾರ ದಿ. 23-02-2025 ರಂದು ಶ್ರೀ ಕಾಡಸಿದ್ದೇಶ್ವರ ಪ್ರೌಢ ಶಾಲೆಯ ಸನ್ 1987 ರಿಂದ 2010 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಶ್ರೀ ಮ. ಘ.ಚ.ಡ ಪವಾಡೇಶ್ವರ ಮಹಾಸ್ವಾಮೀಜಿಗಳು ಮರಡಿಮಠ ಕೊಣ್ಣೂರು ಹಾಗೂ ಪರಮ ಪೂಜ್ಯ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಹನುಮಾಪುರ ಮತ್ತು ಕೌಲಗುಡ್ಡ ಅವರು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಂತರ ಸತ್ಕಾರ ಮೂರ್ತಿಗಳು ಹಿಂದಿನ ಶಿಕ್ಷಕರಾದ ಆರ್.ಎಸ್. ವೀರ ಅವರು ಮಾತನಾಡಿ 30 ವರ್ಷದ ಹಿಂದೆ ನಾನು ಕಲಿಸುವಂತಹ ಮಕ್ಕಳು ಇವತ್ತಿಗೆ ಅನೇಕ ವಿದ್ಯಾರ್ಥಿಗಳು ಎತ್ತರ ಮಟ್ಟಿಗೆ ಬೆಳೆದಿರುವುದು ನನಗೆ ತುಂಬಾ ಸಂತೋಷವಾಗಿದೆ ಗುರು ಶಿಷ್ಯರು ಮತ್ತೆ ನಾವು ಕೂಡುತ್ತಿರುವಂತ ನಿರೀಕ್ಷಣೆ ಇರಲಿಲ್ಲ ಇವತ್ತು ನೀವು ನಾವು ಒಟ್ಟಿಗೆ ಸೇರಿ ಗುರು ಶಿಷ್ಯರ ಮಿಲನದ ಹಬ್ಬವನ್ನು ಆಚರಣೆ ಮಾಡುತ್ತಿರುವುದು ನನಗೆ ಇನ್ನಷ್ಟು ಖುಷಿ ತಂದಿದೆ ಗುರು ಶಿಷ್ಯರ ಸಂಬಂಧ ಗಟ್ಟಿಯಿದೆ ಎಂದು ತೋರಿಸಿಕೊಟ್ಟಿದ್ದೀರಿ ನಾವು ನೀವು ಭೇಟಿಯಾಗುವ ಸೌಭಾಗ್ಯ ಕೂಡಿದ್ದು ಇದರಷ್ಟು ಖುಷಿ ಎಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಹಳೆ ಶಿಕ್ಷಕರಾದ ಎಸ್.ಬಿ. ಗುಂಜಿಗಾವಿ (ನಿವೃತ್ತ ನ್ಯಾಯಾಧೀಶರು) ಜಿ. ಆರ್. ಅವಟಿ. ಪಿ.ಎಚ್. ಬಣಜವಾಡ ಎನ್.ಬಿ. ಮಗದುಮ.ಶ್ರೀಮತಿ ವಿ.ಎಮ್. ಮಮದಾಪೂರ. ಎ.ಆರ್. ಭೋಸಗೆ. ವಿ.ಎಮ್. ಬಿರಾದರ ಎ.ಬಿ. ಮಗದುಮ.ಶ್ರೀಮತಿ ಎನ್.ಎಸ್. ಮನಗೂಳಿ. ಬಿ.ಎಸ್. ಶಿಂಗೆ ಹಾಗೂ ಎಸ್. ಎಸ್. ಡೂಗನವರ. ಎ. ಬಿ. ಪಾಟೀಲ ಎಸ್. ಡಿ. ಮೋಹಿತೆ. ಎಸ್. ಎನ್. ಸಂಕಪಾಳ.ಎಲ್. ಬಿ. ಮಾಳಿ.
ದಿವಂಗತರ ಪರವಾಗಿ.ದಿ. ಎಸ್.ಬಿ. ಕಾರಾಜನಗಿ (ಮುಖ್ಯೋಪಾಧ್ಯಾಯರು) ಶ್ರೀಮತಿ ಕಸ್ತೂರಿ ಎಸ್. ಕಾರಾಜನಗಿ, (ಧರ್ಮಪತ್ನಿ) ಮತ್ತು ಗುಳ್ಳಪ್ಪ ಜತ್ತಿ. ಶಿವಾನಂದ್ ಗೋಲಬಾವಿ. ವಿಶ್ವನಾಥ್ ಪಾಟೀಲ. ರವಿ ಕಾಂಬಳೆ. ಸಿದ್ದುಗೌಡ ಪಾಟೀಲ. ಇನ್ನಿತರ ಅನೇಕ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿಶ್ವನಾಥ್ ಕೋಟೆಕರ್ ನಿರೂಪಿಸಿದರು ಡಾಕ್ಟರ್ ಆನಂದ್ ಗುಂಜಿಗಾವಿ ಸ್ವಾಗತದರು. ಪಿ ಪಿ ಪಾಟೀಲ್ ವಂದಿಸಿದರು.
ವರದಿ: ರಾಜು ವಾಘಮಾರೆ.




