ರಾಮದುರ್ಗ: ತಾಲೂಕಿನ ಅವರಾದಿ ಗ್ರಾಮದ ಅನುಪಮಾ ವಿದ್ಯಾ ಮಂದಿರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1999 ರಿಂದ 2010 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳಿಂದ ಜ್ಞಾನ ದಾಸೋಹಿ ಮೃತ್ಯುಂಜಯ ಶ್ರೀಗಳ ದಿವ್ಯ ಬೆಳಗಿನಲ್ಲಿ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವು ಶ್ರೀ ಫಲಾಹಾರೇಶ್ವರ ಮಠದಲ್ಲಿ ಪೂಜ್ಯ ಶ್ರೀ ಶಿವಮೂರ್ತಿ ಮಹಾ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗುರುವೃಂದದವರಿಗೆ ಹಾಗೂ ಅಥಿತಿಗಳಿಗೆ ಸನ್ಮಾನಿಸುವ ಮೂಲಕ ಗೌರವ ವಂದನೆಗನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಆದರ್ಶ ಪದವಿ ಪೂರ್ವ ಕಾಲೇಜು ಕಟಕೋಳ ಮಹಾವಿದ್ಯಾಲಯದ ಪ್ರಭಾರಿ ಪ್ರಚಾರ್ಯರು ಡಾ. ಸಿದ್ದಪ್ಪ ಕಟ್ಟೆಕಾರ ಆಗಮಿಸಿದ್ದರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳಳು ಉಪಸ್ಥಿತರಿದ್ದರು.
ವರದಿ: ಕುಮಾರ ಎಂ




