Ad imageAd image

” ದೇಶದ ವಿರೋಧಿಗಳನ್ನು ಬಗ್ಗುಬಡಿಯಲು ಯೋಧರಿಗೆ ಧೈರ್ಯ ಆತ್ಮಾಥೈರ್ಯ ಲಭಿಸಲಿ – ಬ್ರಹ್ಮಾಂಡ ಗುರೂಜಿ “

Bharath Vaibhav
” ದೇಶದ ವಿರೋಧಿಗಳನ್ನು ಬಗ್ಗುಬಡಿಯಲು ಯೋಧರಿಗೆ ಧೈರ್ಯ ಆತ್ಮಾಥೈರ್ಯ ಲಭಿಸಲಿ – ಬ್ರಹ್ಮಾಂಡ ಗುರೂಜಿ “
WhatsApp Group Join Now
Telegram Group Join Now

ಬೆಂಗಳೂರು : ದೇಶದಲ್ಲಿ ಆಗುತ್ತಿರುವ ಉಗ್ರರ ನೀಚ ಬುದ್ಧಿಯಿಂದ ಪಾಕಿಸ್ತಾನಕ್ಕೆ ಉತ್ತರ ನೀಡಿದ ನಮ್ಮ ಯೋಧರು ಮತ್ತು ಪ್ರಧಾನಿ ನರೇಂದ್ರ ಮೋದಿ ಎಂದು ಬ್ರಹ್ಮಾಂಡ ಗುರೂಜಿ ಶ್ರೀ ಶ್ರೀ ನರೇಂದ್ರ ಬಾಬು ಶರ್ಮಾ’ ಸಂಪೂರ್ಣ ಶ್ರೀ ವರಮಹಾಲಕ್ಷ್ಮಿ ಮಹಾ ಸಂಸ್ಥಾನ ಬೆಂಗಳೂರು ಸಂಸ್ಥಾಪಕರು ಮತ್ತು ಧರ್ಮ ದರ್ಶಿಗಳ ಗುರೂಜಿ ಹೇಳಿದರು.

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶ್ರೀಗಂಧ ನಗರದಲ್ಲಿರುವ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ರಾಷ್ಟ್ರೀಯಧ್ಯಕ್ಷ ಡಾ. ಡಿ ಮಹೇಶ್ ಗೌಡ್ರು (ಪೂತ್ತೂರು ಮುತ್ತು) ಅವರ ಸ್ವಗ್ರಹದಲ್ಲಿ ಬುದ್ದ ಪೂರ್ಣಿಮಾ ಪ್ರಯುಕ್ತ ಗಣ ಹೋಮ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಪುನಸ್ಕಾರ ನೆರವೇರಿಸಿ ಮಾತನಾಡಿದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥ ನಾಯಕತ್ವ ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡಿ ಭಯೋತ್ಪಾದನೆ ಮತ್ತು ಪಾಕಿಸ್ತಾನ ಅಕೃಮಿತ ಕಾಶ್ಮೀರ ಪಿಒಕೆ ವಾಪಸ್ ಆಗಬೇಕು ಎಂದು ಭಾರತದ ಕೋಟ್ಯಂತರ ಜನರ ಬಯಕೆಯಾಗಿದೆ ಎಂದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ರಾಷ್ಟ್ರೀಯಧ್ಯಕ್ಷ ಡಾ. ಡಿ ಮಹೇಶ್ ಗೌಡ್ರು ಮಾತನಾಡಿ ನಮ್ಮ ವೀರ ಯೋಧರಿಗೆ ಶೌರ್ಯ ಧೈರ್ಯ ಆತ್ಮಾಥೈರ್ಯ ಲಭಿಸಲಿ ದೇಶವನ್ನು ಸಾಮರ್ಥ್ಯವಾಗಿ ಉನ್ನತ ಸ್ಥಾನ ಕೊಂಡವಯುತ್ತಿರುವ ಪ್ರದಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ನೀಡುತ್ತೇವೆ ಮತ್ತು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ದೇಶದ ಶ್ರೇಷ್ಠ ರಾಷ್ಟ್ರಭಕ್ತ ಅವರ ಹೆಸರಿನಲ್ಲಿ ಸ್ವಾಮಿ ವಿವೇಕಾನಂದರ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಮಾಡಿದ್ದೇನೆ ಮತ್ತು ನಮ್ಮ ಮನೆಯಲ್ಲಿ ನಾನು ಧರ್ಮ ಪತ್ನಿ ಶ್ರೀಮತಿ ಸವಿತಾ ಮತ್ತು ಮಕ್ಕಳು ಅಳಿಯ ಕುಟುಂಬದೊಂದಿಗೆ ಪ್ರತಿವರ್ಷ ಬುದ್ದ ಪೂರ್ಣಿಮಾ ದಿನದಂದು ನಮ್ಮ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಾಂಡ ಗುರೂಜಿ ಶ್ರೀ ಶ್ರೀ ನರೇಂದ್ರ ಬಾಬು ಶರ್ಮಾ’ ಸಂಪೂರ್ಣ ಶ್ರೀ ವರಮಹಾಲಕ್ಷ್ಮಿ ಮಹಾ ಸಂಸ್ಥಾನ ಬೆಂಗಳೂರು ಸಂಸ್ಥಾಪಕರು ಮತ್ತು ಧರ್ಮ ದರ್ಶಿಗಳ ಗುರೂಜಿ ಅವರಿಗೆ ಆಹ್ವಾನಿಸಿ ಅವರ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ ಎಂದು ಮಹೇಶ್ ಗೌಡ್ರು ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾಭೂಷಣ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಾನ ರವಿ, ನಿಂಗಪ್ಪ, ಅರುಣ್ ಬೈಲಪ್ಪ, ಕೆಪಿಜೆಪಿ ಪಾರ್ಟಿ ಮಹಿಳಾ ರಾಜ್ಯಾಧ್ಯಕ್ಷೆ ಅಪರ್ಣಾ ಸೇರಿದಂತೆ ನಾಗರಿಕ ಬಂಧು ಭಗನಿಯರು ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!