Ad imageAd image

ಕಟಾಚಾರಕ್ಕೆ ಮಾಡಿದ ಗುರುಮಠಕಲ್ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ

Bharath Vaibhav
ಕಟಾಚಾರಕ್ಕೆ ಮಾಡಿದ ಗುರುಮಠಕಲ್ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now

ಗುರುಮಠಕಲ್ : ಪಟ್ಟಣದ ಮಹಾತ್ಮ ಬಸವೇಶ್ವರರ ವೃತ್ತದ ಬಳಿ ನೂತನ ‘ಇಂದಿರಾ ಕ್ಯಾಂಟೀನ್’ ಕಟ್ಟಡವನ್ನು ಪುರಸಭೆ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಉದ್ಘಾಟಿಸಿದರು.

“ಇಂದಿರಾ ಕ್ಯಾಂಟೀನ್ ಬಡವರಿಗಾಗಿ ವಂದನೀಯ ಯೋಜನೆ ಆಗಿದೆ. ಬರೋಬ್ಬರಿ ಎಂಟು ವರ್ಷಗಳ ಕನಸು ಇಂದು ಸಾಕಾರವಾಗಿದೆ. ಈಗ ಬಡವರು ಕಡಿಮೆ ದರದಲ್ಲಿ ಸರಿಯಾದ ಉಪಾಹಾರ ಮತ್ತು ಊಟವನ್ನು ಪಡೆಯಬಹುದು”

ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಈ ಕಾರ್ಯಕ್ರಮ ಪುರಸಭೆಗೆ ಮಾತ್ರ ಸೀಮಿತ ಯಾವುದೇ ಇಲಾಖೆಯ ಅಧಿಕಾರಿಗಳು ಬರೋವರೆಗೂ ಕಾಯದೇ ತರತುರಿಯಲ್ಲಿ ಉದ್ಘಾಟನೆ ಮಾಡಿ,ಕನಿಷ್ಠ ತಾಲೂಕಿನ ತಹಶೀಲ್ದಾರ ಬಿಟ್ಟೆ ಉದ್ಗಾಟನೆ ಮಾಡಿರುವದು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಉದ್ಗಾಟನೆಗೆ ಆಹ್ವಾನಿಸಿ ಅವಮಾನಿಸಿದಂತಾಗಿದೆ.

ಪುರಸಭೆ ಕೆಲ ಅಧಿಕಾರಿಗಳು, ಪುರಸಭೆಯ ಕೆಲ ಸದಸ್ಯರು, ನಾಮ ನಿರ್ದೇಶಕ ಸದಸ್ಯರು ಬಂದು ಕಾರ್ಯಕ್ರಮ ಮುಗೀತಾ ಕೇವಲ ಹತ್ತು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಉದ್ಗಾಟನೆ ಕಾರ್ಯಕ್ರಮ ಮುಗಿಸಿರುವದು ಇದು ಪುರಸಭೆ ಸಾಧನೆಯಾಗಿದೆ.

ಅಧ್ಯಕ್ಷ ಶ್ರೀಮತಿ ಜಯಶ್ರೀ, ಮುಖ್ಯಾಧಿಕಾರಿ ಭಾರತಿ ದಂಡೊತಿ ಪಟ್ಟಣದ ಮುಖಂಡರು ಪಾಲ್ಗೊಂಡಿದ್ದರು. ನೂತನ ಕ್ಯಾಂಟೀನಿನಲ್ಲಿ ಪುರಸಭೆ ಪೌರರು ಮತ್ತು ಸಿಬ್ಬಂದಿ ಮೊದಲ ಉಪಾಹಾರ ಸೇವಿಸಿದರು.

ಪಟ್ಟಣದ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯ ಮಾಡಲಾಗುತ್ತಿದ್ದು, ಇಂತಹ ಕಲ್ಯಾಣಕಾರಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಲು ಸಹಾಯಮಾಡುತ್ತವೆ ಎನ್ನುವದು ಸಾರ್ವಜನಿಕರ ಅಭಿಪ್ರಾಯವಾದರೆ ಇಲ್ಲಿ ದಿನಚರಿ ಪಟ್ಟಿಯಲ್ಲಿರುವದೇ ಒಂದು ಆಹಾರ ಮೊದಲ ದಿನವೇ ಕೇವಲ ಉಪ್ಪಿಟ್ಟು, ಶೀರಾ ನೀಡಿ ಬಂದ ಸಾರ್ವಜನಿಕರಿಗೆ ಅಸಮಾಧಾನ ಮಾಡಿರುವಂತಹದ್ದು ವಿಪರ್ಯಾಸವೇ ಸರಿನ.

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!