ಸಿರುಗುಪ್ಪ : ನಗರದ ಹೊರವಲಯದಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಬೆಳಿಗ್ಗೆಯಿಂದಲೇ ಕಾಕಡಾರತಿ, ಸುಪ್ರಭಾತ, ಅಭಿಷೇಕ, ಉಚಿತ ಸಾಮೂಹಿಕ ಸಾಯಿ ಸತ್ಯವ್ರತಗಳು, ವಿರಾಟ್‌ಸಾಯಿ ಸ್ತೋತ್ರಪಠಣದಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಮಾನವ ಕುಲದ ಗುರುವಾಗಿ ಅವತರಿಸಿರುವ ಸಾಯಿಬಾಬರ ಆಶೀವಾರ್ದ ಎಲ್ಲರಿಗೂ ದೊರೆಯಲಿ ಎಂದು ಸೇವಾ ಟ್ರಸ್ಟಿನ ಅಧ್ಯಕ್ಷೆ ಮಣೆಮ್ಮ ಅವರು ತಿಳಿಸಿದರು.
ಗುರುವಾರದಂದೇ ಗುರು ಪೂರ್ಣಿಮೆ ಬಂದಿದ್ದು, ದರ್ಶನಕ್ಕೆಂದು ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಗುರು ಸಾಯಿಬಾಬಾ ದರ್ಶನ ಪಡೆದರು.
ದರ್ಶನಕ್ಕೆ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೇ ವೇಳೆ ಮುಖಂಡರಾದ ರಾಮಚಂದ್ರರಾವ್, ವಾಸುನಾಯ್ಡು, ಹರಿಬಾಬು ಸೇರಿದಂತೆ ಟ್ರಸ್ಟಿನ ಇನ್ನಿತರ ಸದಸ್ಯರು, ಭಕ್ತಾದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ