Ad imageAd image

ಸರಕಾರಿ ಪ್ರೌಢ ಶಾಲೆ ರಂಜೋಳದಲ್ಲಿ ಗುಂಡಪ್ಪ ಪೂಜಾರಿ ಅವರ ಜನ್ಮ ದಿನದ ಜೊತೆಗೆ ಗುರುವಂದನಾ ಕಾರ್ಯಕ್ರಮ.

Bharath Vaibhav
ಸರಕಾರಿ ಪ್ರೌಢ ಶಾಲೆ ರಂಜೋಳದಲ್ಲಿ ಗುಂಡಪ್ಪ ಪೂಜಾರಿ ಅವರ ಜನ್ಮ ದಿನದ ಜೊತೆಗೆ ಗುರುವಂದನಾ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ :- ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸೇಡಂ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಗುಂಡಪ್ಪ ಪೂಜಾರಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಪತ್ರಿಕಾ ಮಾಧ್ಯಮ ಸಂಚಾಲಕರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪ್ರೌಢಶಾಲೆ ರಂಜೋಳ ಆವರಣದಲ್ಲಿ 12 ಜನ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನ ಮಾಡಿ,ಗುರುವಂದನ, ಕಾರ್ಯಕ್ರಮ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣ್ ರೆಡ್ಡಿ ಸೇರಿಕಾರ್, ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಜಗದೇವಿ ಪಾಟೀಲ್ , ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಮಾತನಾಡಿ ಹುಟ್ಟು ಹಬ್ಬಗಳು ಕೇವಲ ಡಾಂಬಿಕವಾಗಿ ಕೇಕ್ ಕಟ್ ಮಾಡುವುದರ ಮುಖಾಂತರ ಆಚರಣೆ ಮಾಡಿಕೊಳ್ಳುವುದು ನಮ್ಮ ಸಂಸ್ಕೃತಿ ಅಲ್ಲ ಭಾರತೀಯ ಸಂಸ್ಕೃತಿಯಲ್ಲಿ ಜ್ಯೋತಿ ಬೆಳಗಿಸುತ್ತಾರೆ .

ಆದರೆ ನಮ್ಮ ಹುಟ್ಟು ಹಬ್ಬಗಳಿಗೆ ದೀಪವನ್ನು ಆರಿಸುತ್ತೇವೆ ಇದು ಸರಿಯಲ್ಲ ಭಾರತ ಜಗತ್ತಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿದ ನಾಡು ಆದ್ದರಿಂದ ನಮ್ಮ ಹುಟ್ಟು ಹಬ್ಬಗಳನ್ನು ಶಾಲೆಗಳಿಗೆ ಕಾಣಿಕೆಯನ್ನು ಕೊಡುವುದರ ಮುಖಾಂತರ ಆಚರಣೆ ಮಾಡಿಕೊಂಡರೆ ಹುಟ್ಟುಹಬ್ಬಕ್ಕೆ ಒಂದು ಅರ್ಥ ಇರುತ್ತದೆ ಎಂದು ಅಭಿಪ್ರಾಯಪಟ್ಟರು ಚಂದ್ರಶೇಖರ್ ಪೂಜಾರಿ ನಾಮವಾರ ಶ್ರೀನಿವಾಸ ರೆಡ್ಡಿ ಮದನ ರವಿ ಸಿಂಗ್ ಇಮ್ಡಾಪುರ್ ಚಂದ್ರಶೇಖರ್ ಮಡಿವಾಳ ಭಗವಂತ ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.                                                                                                               

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!