ವಿಜಯಪುರ : ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲಿ ಬಸವೇಶ್ವಣ ಸಂಸ್ಥೆಯ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಶ್ರೀ ಹಡಪದ ಅಪ್ಪಣ್ಣನವರ ಮೂರ್ತಿ ತೆರವುಗೊಳಿಸಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಇಂಡಿ/ಚಡಚಣ ತಾಲೂಕಿನ ಹಡಪದ ಸಮಾಜದಿಂದ ಚಡಚಣ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮುಖಂಡರಾದ ಮಹಾದೇವ ಬನಸೋಡೆ ಮಾತನಾಡಿ,ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾಕ್ಷ್ಯಪಡಿಸುತ್ತದೆ. ಅದೇ ರೀತಿ ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ ಎಂದರು.
ಹಡಪದ ಸಮಾಜದ ಮುಖಂಡ ನಾಗೇಶ ನಾವಿಮಿತನಾಡಿ, ಹಡಪದ ಅಪ್ಪಣ್ಣನವರಿಗೆ ಹಾಗೂ ನಮ್ಮ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ಅನ್ಯಾಯವಾಗಿದ್ದು, ನಮ್ಮ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ.
ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಸಮಾಜದ ಭಕ್ತರಾದ ನಾವು, ನಮ್ಮ ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಘಟನೆ ನಮ್ಮ ಸಮಾಜದ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟುಮಾಡಿದೆ ಎಂದು ಹೇಳಿದರು.
ಆದುದರಿಂದ, ಸರಕಾರ ಮತ್ತು ಮುಖ್ಯಮಂತ್ರಿಗಳು ದಯವಿಟ್ಟು ಈ ಅಕ್ರಮ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಯಥಾಸ್ಥಿತಿಗೆ ತರಬೇಕು. ಹಾಗೆಯೇ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಈ ವೇಳೆ ರಮೇಶ್ ನಾವಿ, ಮಾಳಪ್ಪ ನಾವಿ, ರಾಜು ನಾವಿ, ಸಿದ್ದರಾಮ ನಾವಿ, ಸಿದ್ದರಾಮಯ್ಯ ಚಡಚಣ, ನಾಗೇಶ್ ನಾವಿ, ಸಿದ್ದರಾಯ್ , ಕಾಶಿನಾಥ ಹಡಪದ, ರಮೇಶ ನರಸಪ್ಪ ರಾವತ, ರಾಜು ಮಾದೇವ ರಾವತ, ಅಶೋಕ ನಾವಿ, ರಾಜು ಮೋ ನಾವಿ, ಮುರುಗೇಶ ಸಿಂಪಿ, ಇಲಾಯಿ ನದಾಫ್, ರಮೇಶ್ ಶಿಂದೆ, ಅಣ್ಣಾ ಪೂಜಾರಿ, ನಾಗೇಶ ಗಾಯಕ್ವಾಡ, ಮತ್ತು ಮುರುಗೇಶ್ ಸಿಂಪಿ, ಪಟ್ಟಣ ಪಂಚಾಯತ ಸದಸ್ಯರಾದ ಇಲ್ಲಾಯಿ ನದಾಫ್ ಮತ್ತು ರಮೇಶ ಸಿಂಧೆ ಹಾಗೂ ಇನ್ನೂ ಅನೇಕ ಸಮಾಜ ಬಾಂಧವರು ಸಂಘಟನೆಕಾರರು ಮುಖಂಡರು ಇದ್ದರು.
ವರದಿ:ಎಸ್.ಎಸ್.ಬಗಲಿ




