Ad imageAd image

ಕಾರುಣ್ಯ ಆಶ್ರಮದ ಸೇವೆಗೆ ಶ್ಲಾಘನೀಯ.! ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ. ಬಿ. ನಾಗರಾಜ.

Bharath Vaibhav
ಕಾರುಣ್ಯ ಆಶ್ರಮದ ಸೇವೆಗೆ ಶ್ಲಾಘನೀಯ.! ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ. ಬಿ. ನಾಗರಾಜ.
WhatsApp Group Join Now
Telegram Group Join Now

ಸಿಂಧನೂರು : -ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಂಪಾ ಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸರ್ವಸದಸ್ಯರು ಸೇರಿ ಪಂಪಾಪಟ್ಟಣದಲ್ಲಿ ನೆಲೆ ಮತ್ತು ಸೂರು ಇಲ್ಲದೆ ಸುಮಾರು ವರ್ಷಗಳಿಂದ ವಾಸವಾಗಿದ್ದ ಪದ್ದಮ್ಮ ವಯಸ್ಸು 63 ರ ಅನಾಥ ವೃದ್ಧಿಯನ್ನು ಕರೆದುಕೊಂಡು ಬಂದು ಸಿಂಧನೂರಿನ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಕೊಡಿಸಿ ತಮ್ಮೂರಿನ ಪಂಚಾಯಿತಿ ವತಿಯಿಂದ ಕರುನಾಡ ಕಾರುಣ್ಯ ಆಶ್ರಮದ ಕರುಣಾಮಯಿ ಆಶ್ರಮದ ಆಡಳಿತಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರ ಕೈಗೆ 11,000 ರೂಪಾಯಿಗಳ ಚೆಕ್ಕು ವಿತರಿಸಿದರು ಈ ಸಂದರ್ಭದಲ್ಲಿ ಪಂಪಾಪಟ್ಟಣದ ಗ್ರಾ. ಪಂ. ಅಧ್ಯಕ್ಷರಾದ ಬಿ. ನಾಗರಾಜ.ಮತ್ತು ಸದಸ್ಯರು.

ಹಾಗೂ ಸಮಾಜ ಸೇವಕರಾದ- ಶಾಂತಮ್ಮ. ಹುಲಿಗೆಮ್ಮ. ಅವರನ್ನು ಕಾರುಣ್ಯ ಆಶ್ರಮ ವತಿಯಿಂದ ಸನ್ಮಾನಿಸಿ ಗೌರವಿಸಿ, ನೆನಪಿನ ಕಾಣಿಕೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪಂಪಾಪಟ್ಟಣದ ಗ್ರಾಮ ಪಂಚಾಯತ ಅಧ್ಯಕ್ಷ ಮಾತನಾಡಿ ನಮ್ಮ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕಾರುಣ್ಯಶ್ರಮದ ಸೇವೆ ಮನೆಮಾತಾಗಿದೆ ನಮ್ಮೂರಿನ ತಹಸಿಲ್ದಾರ ಕವಿತಾ ಮೇಡಂ ಅವರನ್ನು ಭೇಟಿಯಾದಾಗ ಕಾರುಣ್ಯ ಆಶ್ರಮದ ಬಗ್ಗೆ ಸಂಪೂರ್ಣವಾಗಿ ವಿವರ ನೀಡಿದರು ಅದಕ್ಕಾಗಿ ಈ ಅನಾಥ ವೃದ್ಧಿಯನ್ನು ನಾವು ಇಲ್ಲಿಗೆ ಕರೆದು ತಂದೆವು ಡಾ. ಚನ್ನಬಸವ ಸ್ವಾಮಿ ದಂಪತಿಗಳು ವೃದ್ಧರನ್ನು.

ವಯಸ್ಕರ ಬುದ್ಧಿಮಾಂದ್ಯರನ್ನು. ಅನಾಥರನ್ನು ತಮ್ಮ ಆಶ್ರಮದಲ್ಲಿ ತಮ್ಮ ಸ್ವಂತ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬ ಮಾಹಿತಿ ಇದೆ ಅದಕ್ಕಾಗಿ ಈ ಅನಾಥ ವೃದ್ಧಿಯನ್ನು ನಮ್ಮ ಪಂಚಾಯತ ವತಿಯಿಂದ ಈ ಕಾರುಣ್ಯ ಆಶ್ರಮಕ್ಕೆ ಬಿಡಲು ಬಂದಿರುತ್ತೇವೆ ಇಂತಹ ಒಂದು ಒಳ್ಳೆಯ ಸೇವೆ ಮಾಡುತ್ತಿರುವ ಡಾ. ಚನ್ನಬಸವ ಸ್ವಾಮಿಗಳು ಹಾಗೂ ಅವರ ಪತ್ನಿ ಸುಜಾತ ರವರಿಗೆ ನೂರು ವಂದನೆಗಳು ಹೇಳಿದರು.ಈ ಸಮಯದಲ್ಲಿ ಪಂಪ ಪಟ್ಟಣದ ಪಂಚಾಯತ ಸದಸ್ಯರಾದ – ಎನ್. ನಾಗರಾಜ. ಮಂಜುನಾಥ. ಬಾಳಪ್ಪ. ಸಿ.ಎಲ್. ಕುಮಾರ್. ಹಾಗೂ ಆಶ್ರಮ ಸಿಬ್ಬಂದಿಗಳು ಇದ್ದರು.

 ವರದಿ:-  ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!