Ad imageAd image

ಹಕಾರಿ ಕೆರೆ ಮತ್ತು ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Bharath Vaibhav
ಹಕಾರಿ ಕೆರೆ ಮತ್ತು ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ
WhatsApp Group Join Now
Telegram Group Join Now

——————————————-ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನ ಅಂಗವಾಗಿ

ಮಲ್ಲಮ್ಮನ ಬೆಳವಡಿ: ಪೂಜ್ಯ ಡಾ||ಡಿ ವೀರೇಂದ್ರ ಹೆಗ್ಗಡೆರವರ 78ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಸ್ತಾಂತರವಾಗಿರುವ ಹಕಾರಿ ಕೆರೆ ಮತ್ತು ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ
ಪರಮಪೂಜ್ಯ ರಾಜಶ್ರೀ ಡಾ ಡಿ .ವೀರೇಂದ್ರ ಹೆಗ್ಗಡೆ ಅವರು ಹಾಗೂ ಮಾತೃಶ್ರೀ ಡಾ ವಿ .ಹೇಮಾವತಿ ಅಮ್ಮನವರ ಕೃಪಾ ಆಶೀರ್ವಾದದೊಂದಿಗೆ..ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ಬೈಲಹೊಂಗಲ ಇವರ ಆರ್ಥಿಕ ಸಹಕಾರದೊಂದಿಗೆ ಮತ್ತು ಬುಡರಕಟ್ಟಿ ಗ್ರಾಮ ಪಂಚಾಯಿತಿ ಹಾಗೂ ಹಕಾರಿ ಕೆರೆ ಅಭಿವೃದ್ಧಿ ಸಮಿತಿ ಇವರ ಸಹಭಾಗಿತ್ವದಲ್ಲಿ, ಇಂದು ಪರಮ ಪೂಜ್ಯ ಖಾವಂದರ 78ನೇ ವರ್ಷದ ಜನುಮ ದಿನದ ಅಂಗವಾಗಿ ಬುಡರಕಟ್ಟಿ ಗ್ರಾಮದ ಹಕಾರಿ ಕೆರೆಯ ನಾಮಫಲಕ ಅನಾವರಣ, ವರಮಹಾಲಕ್ಷ್ಮಿ ಪೂಜೆ ಮತ್ತು ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ಕೆರೆ ನಾಮಫಲಕ ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ಸಭಾ ಕಾರ್ಯಕ್ರಮವನ್ನು ಶಾಸಕರಾದ ಮಹಾಂತೇಶ್ ಕೌಜಲಗಿ ಅವರು ದೀಪ ಬೆಳಗಿಸಿದರ ಮೂಲಕ ಉದ್ಘಾಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು, ಜೆಡಿಎಸ್ ಜಿಲ್ಲಾ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ನಿರ್ದೇಶಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾಮ ಪಂಚಾಯತ್ ಪಿಡಿಒ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕೆರೆ ಹಸ್ತಾಂತರ ಮತ್ತು ನಾಮಪತ್ರ ವಿತರಣೆಯನ್ನು ಮಾನ್ಯ ಜಿಲ್ಲಾ ನಿರ್ದೇಶಕರು ನೆರವೇರಿಸಿದರು.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!