Ad imageAd image

ಚಿಕ್ಕೋಡಿ ಜಿಲ್ಲೆಗಾಗಿ ಹಕ್ಕೊತ್ತಾಯ

Bharath Vaibhav
ಚಿಕ್ಕೋಡಿ ಜಿಲ್ಲೆಗಾಗಿ ಹಕ್ಕೊತ್ತಾಯ
WhatsApp Group Join Now
Telegram Group Join Now

ಚಿಕ್ಕೋಡಿ: ಜಿಲ್ಲಾ ಘೋಷಣೆ 2 ನೇ ಅಕ್ಟೋಬರ್ ಗಾಂಧಿಜೀ ಜಯಂತಿಯಂದು ಆಗಬೇಕೆಂದು, ಶ್ರಿ ಸಂಪಾಧನಾ ಮಹಾ ಸ್ವಾಮೀಜೀ ಅವರ ನೇತೃತ್ವದಲ್ಲಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಹಕ್ಕೊತ್ತಾಯ ಜರುಗಿತು.

ಪತ್ರಿಕಾ ಗೋಷ್ಠಿ ಯಲ್ಲಿ ಸಂಪಾದನಾ ಸ್ವಾಮೀಜೀ ಅವರು ಮಾತನಾಡಿ ಮೂರು ದಶಕಗಳಿಂದ ನಮ್ಮ ಹೋರಾಟ ಸತತವಾಗಿ ನಡೆದಿದೆ. ಬೆಳಗಾವಿ ವಿಶಾಲವಾದ ಜಿಲ್ಲೆ ಆಡಳಿತ ದೃಷ್ಟಿಯಿಂದ ಜಿಲ್ಲಾ ವಿಭಜನೆ ಮಾಡಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿ, ಜಿಲ್ಲೆಗೆ ಬೇಕಾಗುವ ಎಲ್ಲ ಕಚೇರಿಗಳು ಚಿಕ್ಕೋಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜನರ ರೈತರ ಯುವಕರ ಅನುಕೂಲಕ್ಕಾಗಿ ಜಿಲ್ಲಾ ಘೋಷಣೆ ಅನಿವಾರ್ಯವಾಗಿದೆ, ನಾವು ಮೂರು ದಶಕಗಳಿಂದ ಗಾಂಧಿಯವರ ಸ್ವಾತಂತ್ರ್ಯ ಹೋರಾಟದಂತೆ ಅಹಿಂಸಾತ್ಮಕ ಹೋರಾಟ ಮಾಡುತ್ತ ಬಂದಿದ್ದೇವೆ. ಯಾರಿಗೂ ನಾವು ತೊಂದರೆ ಮಾಡಿಲ್ಲ, ಕಾರಣ ಬರುವ ಗಾಂಧೀಜೀ ಜಯಂತಿಯ ದಿನದಂದು ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿ ಎಂದು ಸರಕಾರಕ್ಕೆ ಒತ್ತಾಯಿಸಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಸದನದಲ್ಲಿ ಸತೀಶ ಜಾರ್ಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಪ್ರಕಾಶ ಹುಕ್ಕೇರಿ, ಶಶಿಕಲಾ ಜೊಲ್ಲೆ, ಮಹೇಂದ್ರ ತಮ್ಮಣ್ಣವರ ಇವರು ಚಿಕ್ಕೋಡಿ ಜಿಲ್ಲೆ ಗಾಗಿ ಒತ್ತಾಯಿಸಿದ್ದಾರೆ, ಚಿಕ್ಕೋಡಿ ಜಿಲ್ಲೆಯಾಗಲು ಪ್ರಭಾವಿ ವ್ಯಕ್ತಿಗಳು ಕಂಟಕ ಮಾಡುತ್ತಿದ್ದಾರೆ, ಗೋಕಾಕ ಜಿಲ್ಲೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಕೂಡಲೇ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿ, ಇಲ್ಲಿಯವರೆಗೆ, ಕಿವಡ ವಕೀಲರು, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಹಕ್ಕ್ಯಾಗೋಳ, ಶೆಟ್ಟಿ ವಕೀಲರು, ಕಟ್ಟಿಮನಿ, ಹೀಗೆ ಬಹಳಷ್ಟು ಹಿರಿಯರು ಹೋರಾಟ ಮಾಡಿದ್ದಾರೆ, ನುಡಿದಂತೆ ನಡೆಯುವ ಸರಕಾರ ಕೂಡಲೇ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಲಿ ಎಂದು ಹೇಳಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ನಮ್ಮ ಜೀವನ ಕೇವಲ ಹೋರಾಟದಲ್ಲಿಯೇ ಮುಂದೆವರಿದಿದೆ, ಪ್ರತಿಯೊಂದು ಸರಕಾರ ಸುಳ್ಳು ಹೇಳುತ್ತಲೇ ಬಂದಿವೆ, ಚಿಕ್ಕೋಡಿ ಜಿಲ್ಲೆ ಘೋಷಣೆ ಆಗದಿದ್ದಲ್ಲಿ ಮಾಜಿ ಸಚಿವರಾದ ಉಮೇಶ ಕತ್ತಿಯವರು ಕೇಳಿದ ಹಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ಕೇಳುವ ದಿವಸಗಳು ಬರಲಿವೆ, ತೆಲಂಗಾನಾ ಮಾದರಿಯಲ್ಲಿ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಸರಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ, ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಹೋರಾಟಗಾರರಾದ ಅನೀಲ ನಾವಿ, ಅಪ್ಪಾಸಾಹೇಬ ಹಿರೇಕೋಡಿ, ಪ್ರತಾಪ ಪಾಟೀಲ, ಚಂದ್ರಶೇಖರ ಅರಭಾವಿ, ಮಂಜು ಪರಗೌಡರ, ಖಾನಪ್ಪಾ ಬಾಡಕರ, ದುಂಡಪ್ಪಾ ಜೌಗಲಾ, ರುದ್ರಯ್ಯಾ ಹಿರೇಮಠ, ಮೋಹನ ಪಾಟೀಲ, ಶಿವು ಮದಾಳೆ, ಸಚೀನ ದೊಡ್ಡಮನಿ, ಮಾಳು ಕರೆಣ್ಣವರ, ರಫೀಕ್ ಪಠಾಣ, ಶಿವಾಜಿ ಖಾಡೆ, ಸಂತೋಷ ಕುರಣೆ, ಅಪ್ಪಾಸಾಹೇಬ ಕುರಣೆ, ಸಿದ್ಧರಾಮ ಕರಗಾವೆ, ಸುರೇಶ ಖದ್ದಿ ಹಾಗೂ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ:  ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!