ಸಿಂಧನೂರು: ಸೆ 22, ದಸರಾ ಉತ್ಸವ ಸಮಿತಿಯಿಂದ ಮುಕ್ಕುಂದ ಗ್ರಾಮದಲ್ಲಿ ತುಂಗಭದ್ರೆಗೆ ಅಂಬಾ ಗಾರುತಿ ಕಾರ್ಯಕ್ರಮ ಕಿಕ್ಕಿರಿದ ಸೇರಿದ ಮುಕ್ಕುಂದಾ ಗ್ರಾಮಸ್ಥರು, ವಾರಣಾಸಿಯ ಅರ್ಚಕರು ಸಲ್ಲಿಸಿದ ವಿಶೇಷ ಪೂಜೆ ಈ ಬಾರಿ ಉತ್ಸವದ ಪ್ರಾರಂಭದಲ್ಲೇ ಜನತೆಗೆ ಮೆಚ್ಚಿಗೆಗೆ ಪಾತ್ರವಾಗಿದೆ.
ತುಂಗಭದ್ರೆಗೆ ಅಂಬಾಗಾರುತಿ ಕಾರ್ಯಕ್ರಮವು ಮುಕ್ಕುಂದ ಗ್ರಾಮದ ಮುರಾಹರಿ ದೇವಸ್ಥಾನದಿಂದ ನದಿ ದಡದಲ್ಲಿರುವ ಕರಿ ವೀರೇಶ್ವರ ದೇವಸ್ಥಾನದವರೆಗೆ ಭವ್ಯವಾದ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಮಹಿಳೆಯರಿಂದ ಕುಂಭ, ಕಳಸ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಈ ಅದ್ದೂರಿ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಂತಾಯಿತು.

ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಶಾಸಕ ಹಂಪನಗೌಡ ಬಾದರ್ಲಿ, ಗೌರವಾಧ್ಯಕ್ಷ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಬಸವರಾಜ ನಾಡಗೌಡ.ಅಲ್ಲಮ ಪ್ರಭು ಪೂಜಾರಿ. ತಾಸಿಲ್ದಾರ್ ಅರುಣ ಎಚ್. ದೇಸಾಯಿ. ತಾ. ಪಂ.ಇಓ ಚಂದ್ರಶೇಖರ್. ರೈಲ್ವೆ ಇಲಾಖೆ ಶೃತಿ ಕೆ. ಶ್ರೀದೇವಿ ಶ್ರೀನಿವಾಸ್. ಸೇರಿದಂತೆ ಪ್ರಮುಖರು ತುಂಗೆಗೆ ಬಾಗಿನ ಅರ್ಪಿಸಿದ ನಂತರ ಮಳೆರಾಯ ದಿಢೀರನೆ ಬಂದರೂ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮುಕ್ಕುಂದಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವಾರಣಾಸಿಯ ಅರ್ಚಕರ ಪೂಜೆ ಮುಗಿಯುವವರೆಗೂ ಮಳೆಯಲ್ಲೆ ತುಂಗಭದ್ರೆಗೆ ಅಂಬಾಗಾರುತಿ ಸಲ್ಲಿಸಿದ್ದು ವಿಶೇಷವಾಗಿತ್ತು. ಮಳೆ ಬಂದರೂ ಕೂಡ ತುಂಗೆಗೆ ಅಂಬಾ ಗಾರುತಿ ಮುಗಿಯುವವರೆಗೆ ಹಾಗೂ ಸಿಂಧನೂರು ದಸರಾ ಉತ್ಸವ ಯಶಸ್ವಿಗೆ ಮುನ್ನುಡಿ ಬರೆದ ಗ್ರಾಮಸ್ಥರಿಗೆ ಶಾಸಕ ಹಂಪನಗೌಡ ಬಾದರ್ಲಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ವಿವಿಧ ಪಕ್ಷದ ಮುಖಂಡರು ಪಾಲ್ಗೊಂಡಿದ್ದು, ಡಿವೈಎಸ್ಪಿ ಬಿ.ಎಸ್.ತಳವಾರ್ ನೇತೃತ್ವದಲ್ಲಿ ಸಕಲ ಭದ್ರತೆ ಕಲ್ಪಿಸಲಾಗಿತ್ತು.
ವರದಿ:ಬಸವರಾಜ ಬುಕ್ಕನಹಟ್ಟಿ




