ಧಮತರಿ, ಛತ್ತೀಸ್ಗಢ: ಧಮತರಿಯ ಬಿಜನಪುರಿ ಗ್ರಾಮದ ಮಹಿಳೆಯರು ಪ್ರತಿ ವರ್ಷವೂ ಕೆಲವು ತಿಂಗಳು ಕೃಷಿಯನ್ನೇ ಅವಲಂಬಿಸಬೇಕಾಗುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಇವರಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಪಕ್ಕದ ರಾಜ್ಯ ಒಡಿಶಾದಿಂದ ಬಂದ ಬದಲಾವಣೆಯ ಗಾಳಿಯಿಂದಾಗಿ ಕೈಮಗ್ಗದ ಕ್ರಾಂತಿಯುಂಟಾಗಿದೆ. ಈ ಕೈಮಗ್ಗದ ಕ್ರಾಂತಿ ನಮ್ಮ ಬದುಕನ್ನೇ ಬದಲಿಸುತ್ತದೆ ಎಂಬುದು ಇವರಿಗೆ ಗೊತ್ತೇ ಇರಲಿಲ್ಲ.
2018 ರಲ್ಲಿ ಬಿಜನಪುರಿ ನೇಕಾರರ ಸಹಕಾರ ಸಂಘ ಲಿಮಿಟೆಡ್ ಸ್ಥಾಪನೆ ಮಾಡಲಾಯಿತು. ಕೇವಲ 24 ಕೆಲಸಗಾರರಿಂದ ಹುಟ್ಟಿಕೊಂಡಿದ್ದ ಸಂಘ ಈಗ 230 ಹೆಚ್ಚು ನೇಕಾರರನ್ನು ಹೊಂದಿದೆ. ಈ ಸಹಕಾರಿ ಸಂಘದಲ್ಲಿ ಮಹಿಳೆಯರಿಗೆ ಸಂಬಲ್ಪುರಿ ಸೀರೆಗಳನ್ನು ನೇಯ್ಗೆ ಮಾಡುವ ತರಬೇತಿ ನೀಡಿ, ಕೆಲಸಕ್ಕೆ ಅಣಿಗೊಳಿಲಾಗಿತ್ತು.
ಈ ಸೀರೆಗೆ ಭಾರಿ ಬೇಡಿಕೆ ಇರುವುದರಿಂದ ಒಡಿಶಾದ ಸಂಬಲ್ಪುರದಲ್ಲಿ ನೇಕಾರರಿಗೆ ಜೀವನೋಪಾಯದ ಮುಖ್ಯ ಸಾಧನವೂ ಆಗಿದೆ. ಹೀಗೆ ಆರಂಭವಾದ ತರಬೇತಿ ಅಲ್ಲಿನ ಮಹಿಳೆಯರಿಗೆ ಕೆಲಸ ನೀಡಿತು. ಪ್ರತಿ ಸೀರೆಗೆ ರೂ 300- ರೂ 350 ಗಳಿಸಲು ಈ ತರಬೇತಿ ಸಹಾಯ ಮಾಡಿದೆ. ಕೆಲವರು ತಿಂಗಳಿಗೆ ರೂ 10,000-ರೂ 12,000 ಆದಾಯವನ್ನೂ ಗಳಿಸುತ್ತಿದ್ದಾರೆ.
ಇಂದು ಈ ಸಂಘದಲ್ಲಿ 230 ಕುಶಲಕರ್ಮಿಗಳಿದ್ದಾರೆ. ಇದರಲ್ಲಿ 180 ಮಹಿಳೆಯರು ಸೀರೆಗಳನ್ನು ಮಾತ್ರವಲ್ಲದೇ ಶಾಲಾ ಸಮವಸ್ತ್ರಗಳು, ಆಸ್ಪತ್ರೆಯ ಬೆಡ್‌ಶೀಟ್‌ಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಬಟ್ಟೆಗಳನ್ನು ಸಹ ತಯಾರಿಸಿ, ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಸ್ವಯಂ ಉದ್ಯೋಗದ ಬಗ್ಗೆ ಸೊಸೈಟಿಯ ವ್ಯವಸ್ಥಾಪಕರ ಪ್ರತಿಕ್ರಿಯೆ: ನಾಲ್ಕು ತಿಂಗಳು ಮಾತ್ರ ದುಡಿಯುತ್ತಿದ್ದ ಮಹಿಳೆಯರು ಈಗ ವರ್ಷವಿಡೀ ದುಡಿಯುತ್ತಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿಯ ನಂತರ ಇವರೆಲ್ಲ 1000 ದಿಂದ 1200 ರೂವರೆಗೂ ಗಳಿಕೆ ಮಾಡುತ್ತಿದ್ದಾರೆ ಎಂದು ಸೊಸೈಟಿಯ ವ್ಯವಸ್ಥಾಪಕ ಅವಧಾರಂ ದೇವಾಂಗಣ್ಣ ಹೇಳಿದ್ದಾರೆ.