——————————ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ
ನಿಪ್ಪಾಣಿ: ಯೋಜನಾ ಕಚೇರಿ ವ್ಯಾಪ್ತಿಯ ಸೌಂದಲಗಾ ವಲಯದ ಜಾತ್ರಾಟ ಕಾರ್ಯಕ್ಷೇತ್ರದ ವಾತ್ಸಲ್ಯ ಫಲಾನುಭವಿ ಇಂದುತಾಯಿ ಮಾರುತಿ ಮಹಾಜನರವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಾತ್ಸಲ್ಯ ಮನೆಯನ್ನು ಪರಮಪೂಜ್ಯ ಡಾಕ್ಟರ್ ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಹಸ್ತಾಂತರ ಕಾರ್ಯಕ್ರಮವನ್ನು ಮಾಡಲಾಯಿತು.

ನಿಪ್ಪಾಣಿ ತಾಲೂಕಿನ ಶಾಸಕರಾದ ಸೌ. ಶಶಿಕಲಾ ಅಣ್ಣಸಾಹೇಬ ಜೊಲ್ಲೆ , ಎಂ. ಪಿ. ಪಾಟೀಲ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರು , ಬಿ.ಎಸ್. ತಳವಾರ ಸಿ. ಪಿ. ಐ. ತಳವಾರ ನಿಪ್ಪಾಣಿ, ರಮೇಶ್ ಭೀವಶಿ ಪಿ ಕೆ ಪಿಎಸ್ ಅಧ್ಯಕ್ಷರು, ಸಾಗರ ಪಾಟೀಲ ಲಿಂಗಾಯತ ಸಮಾಜದ ಅಧ್ಯಕ್ಷರು, ಸಿದ್ದು ನರಾಟೆ ಜಿಲ್ಲಾ ಪಂಚಾಯತ ಸದಸ್ಯರು, ಚಿಕ್ಕೋಡಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಪಾಲ ಮುನ್ನೊಳ್ಳಿ, ಚಿಕ್ಕೋಡಿ ಜಿಲ್ಲಾ ನಿರ್ದೇಶಕರಾದ ವಿಠ್ಠಲ ಸಾಲಿಯಾನ ಸರ್,ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಲಕ್ಷ್ಮೀ ಮಗದುಮ್ಮ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಮಹದೇವಪ್ಪ ಬರಗಲೆ ,ಲಕ್ಷ್ಮಿಕಾಂತ್ ಕೆ, ನಿಪ್ಪಾಣಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಮಂಜುನಾಥ್ ಎಚ್. ಊರಿನ ಗಣ್ಯರು ಸ್ವಸಹಾಯ ಸಂಘದ ಸದಸ್ಯರು ನೆರವೇರಿಸಿದರು.
ಮಾತನಾಡಿದ ಸೌ. ಶಶಿಕಲಾ ಜೊಲ್ಲೆ ಶಾಸಕರು ನಿಪ್ಪಾಣಿ ಅವರು ಪೂಜ್ಯರು ಗ್ರಾಮೀಣ ಭಾಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕನಸನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿದ್ದು ಇದರಿಂದ ರಾಜ್ಯದ ಲಕ್ಷಾಂತರ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ತಮ್ಮ ಜೀವನಕ್ಕೆ ಪೂಜ್ಯರು ಹಾಗೂ ಅಮ್ಮನವರು ಮಾದರಿ ಎಂದು ತಿಳಿಸಿದರು.
ವೃದ್ಧಾಪ್ಯದಲ್ಲಿ ಸಂತೃಪ್ತಿಯಿಂದ ಜೀವನ ನಡೆಸಲು ಜ್ಞಾನವಿಕಾಸದ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರು ನೊಂದವರ ಕಣ್ಣೀರು ಒರೆಸುವ ಮಾತೆಯಾಗಿ ಅವರಿಗೆ ಮಾಸಾಶನ,ಆಹಾರ ಮತ್ತು ಸೂರು ಇಲ್ಲದವರಿಗೆ ವಾತ್ಸಲ್ಯ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದು ಇಂದುತಾಯಿಯವರು ಈ ಮನೆಯಲ್ಲಿ ನೆಮ್ಮದಿಯಿಂದ ಬಾಳುವ ಶಕ್ತಿಯನ್ನು ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.
ಚಿಕ್ಕೋಡಿ ಜಿಲ್ಲಾ ನಿರ್ದೇಶಕರು ವಿಠ್ಠಲ ಸಾಲಿಯಾನ ಸರ್ ಮಾತನಾಡಿ ಪೂಜ್ಯರ ಹುಟ್ಟು ಹಬ್ಬದ ಶುಭದಿನ ಇಂದು ಕರ್ನಾಟಕ ರಾಜ್ಯದಂತ ಅನೇಕ ಜನಪರ ಕಾರ್ಯಕ್ರಮವನ್ನು ಯೋಜನೆ ಮುಖಾಂತರ ಮಾಡುತ್ತಿದ್ದಾರೆ ಹೇಮಾವತಿ ಅಮ್ಮನವರ ಪ್ರೀತಿಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಮೂಲಕ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರಿಗೆ ಮಾಶಾಸನ ಮತ್ತು ಸೂರು ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿದ್ದು ಪೂಜ್ಯರ ಹುಟ್ಟು ಹಬ್ಬದ ಪ್ರಯುಕ್ತ ಮನೆ ಹಸ್ತಾಂತರ ಮಾಡುತಿದ್ದು ಇಂದುತಾಯಿ ಅವರಿಗೆ ಶುಭ ಹಾರೈಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಪಾಲ ಮುನ್ನೊಳ್ಳಿ ಸರ್ ಅವರು ಪ್ರಸ್ತುತ ಸಮಾಜದಲ್ಲಿ ಆಸ್ತಿ ಗೋಸ್ಕರ ಮನೆಯನ್ನು ಭಾಗ ಮಾಡಿಕೊಳ್ಳುವ ಮನಸ್ಥಿತಿ ಇರುವಾಗ ನೊಂದವರ ಭಾವನೆಗಳಿಗೆ ಸ್ಪಂದಿಸುವವರು ಯಾರೂ ಇಲ್ಲದಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಂತಹ ಅಸಹಾಯಕರನ್ನು ಗುರುತಿಸಿ ಅವರಿಗೆ ಜೀವನ ನಡೆಸಲು ಬೇಕಾದ ಎಲ್ಲ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪಾರ್ವತಿ, ವಲಯದ ಮೇಲ್ವಿಚಾರಕರಾದ ಸೌ. ಶಿವಲೀಲಾ, ಒಕ್ಕೂಟದ ಅಧ್ಯಕರಾದ ಮನಿಷಾ ಹರದಾರೆ ವಲಯದ ಸೇವಾ ಪ್ರತಿನಿಧಿಗಳು ಮತ್ತು , ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




