ಸಿಂಧನೂರು: ಜುಲೈ 4ರಂದು ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜೇಷನ್ (ಸಿಐಒ) ಹೊಣೆಗಾರಿಕೆಯ ಕಾಳಜಿಯೊಂದಿಗೆ “ಮಣ್ಣಿನಲ್ಲಿ ಕೈಗಳು, ಭಾರತದೊಂದಿಗೆ ಹೃದಯಗಳು” ಎಂಬ ಶೀರ್ಷಿಕೆಯೊಂದಿಗೆ ಜೂನ್ 25ರಿಂದ ಜುಲೈ 25ರವರೆಗೆ ಮಾಸ ಪೂರ್ತಿ ಹಸಿರು ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ನಗರದ ಪತ್ರಿಕ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಣ್ಣರ ಸಹೋದರಿಯರು ಪರಿಸರ ಸಂರಕ್ಷಣೆಯ ಜಾಗೃತಿ ಮತ್ತು ಪಾರ್ಕ್ ಶಾಲಾ ಆವರಣ ಮಸೀದಿ ಪ್ರದೇಶ ಸಹಿತ ನಗರದಲ್ಲಿ ಸುಮಾರು ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಗಿಡಗಳನ್ನು ನೆಡಲಾಗುವುದು ಮತ್ತು ಸಮುದಾಯಗಳ ನಡುವಿನ ಸಹ ಭಾವವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಇದರ ಕುರಿತು ವಿವರಣೆಗಳನ್ನು ಆಯೇಷಾ ಹಾಗೂ ಇತರ ಸಹೋದರಿಯರು ನೀಡಿದರು.
ಅಭಿಯಾನದ ಸಮಾರೋಪ ಸಮಾರಂಭ ಇದೇ ತಿಂಗಳ ಜುಲೈ 26ರಂದು ಶನಿವಾರ ಮೆರವಣಿಗೆ ನಂತರ ಮಿಲಾಪ್ ಶಾದಿ ಮಹಲಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಪರಿಸರ ಸಂರಕ್ಷಣೆಗೆ ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಇನ್ನಿತರ ವಿಷಯಗಳು ಬರಲಿವೆ ಎಂದರು ಕಾರ್ಯಕ್ರಮಕ್ಕೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಐಒ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




