ಸೇಡಂ:-ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಸೇಡಂ ಮತ್ತು ಕೊಡೇಕಲ್ಲ ಚನ್ನಬಸವಣ್ಣ ಅಭಿಮಾನಿ ಬಳಗ ಸಹಯೋಗದಲ್ಲಿ ಮುರಗೆಪ್ಪ. ಆರ್. ಹೆಚ್. ಹಣಮನಹಳ್ಳಿ ಅವರ ತತ್ವಪದಗಳ ಸಂಕಲನವಾದ ಹ್ಯಾಂಗಾನ ಗುರುವು ಹ್ಯಾಂಗಾನೋ ಕೃತಿಯ ಲೋಕಾರ್ಪಣೆ ಸಮಾರಂಭವು ಿನಾಂಕ ೦೩-೦೮-೨೦೨೪.ರಂದು ಮುಂಜಾನೆ ೧೧: ೩೦ ಕ್ಕೆ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪ ಸೇಡಂದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೂಜ್ಯ ಸದಾಶಿವ ಸ್ವಾಮಿಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಸೇಡಂ.ರವರ ದಿವ್ಯ ಸಾನಿಧ್ಯದಲ್ಲಿ, ಕಾರ್ಯಕ್ರಮದ
ಉದ್ಘಾಟಕನೆ ಅಜಯಕುಮಾರ ಉಪ ನಿರ್ದೇಶಕರು ನಗರ ಕೇಂದ್ರ ಗ್ರಂಥಾಲಯ ಕಲಬುರಗಿ ಮಾಡುವರು.
ಪುಸ್ತಕ ಬಿಡುಗಡೆ ಪ್ರಭಾಕರ ಜೋಶಿ. ಅಧ್ಯಕ್ಷರು. ನೃಪತುಂಗ ಅಧ್ಯಯನ ಸಂಸ್ಥೆ ಸೇಡಂ. ರವರು ಮಾಡಲಿದ್ದು,ಗಂಗಾಧರ ಸ್ವಾಮಿ. ತಾಲೂಕ ಸಂಯೋಜಕರು. ಅಜೀಂ ಪ್ರೇಮಜಿ ಫೌಂಡೇಷನ್ ಸೇಡಂ.ರವರು ಪುಸ್ತಕ ಪರಿಚಯಸುವರು.
ಮುಖ್ಯ ಅತಿಥಿಗಳಾಗಿ,ಲಿಂಗಾರೆಡ್ಡಿ ಶೇರಿ ಹಿರಿಯ ಸಾಹಿತಿಗಳು ಸೇಡಂ.
ಮಾರುತಿ ಹುಜರಾತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇಡಂ.
ಶಂಕರಲಿಂಗಪ್ಪ ಕ್ಷೇತ್ರ ಸಮನ್ವಯಾಧಿಕಾರಿಗಳು ಸೇಡಂ.
ವೆಂಕಟರೆಡ್ಡಿ ಮಾಲಿ ಪಾಟೀಲ ಹಣಮನಹಳ್ಳಿ.
ಸುಮಾ.ಎಲ್. ಚಿಮ್ಮನಚೋಡಕರ್.ತಾಲೂಕಾ ಅಧ್ಯಕ್ಷರು. ಕ. ಸಾ. ಪ. ಸೇಡಂ,ಶಿವಶಂಕರಯ್ಯ ಸ್ವಾಮಿ ತಾಲೂಕಾ ಅಧ್ಯಕ್ಷರು ಕ.ರಾ.ಸ.ನೌ.ಸಂ.ಸೇಡಂ.ಬಸವರಾಜ ಸಾಗರ ತಾಲೂಕಾ ಅಧ್ಯಕ್ಷರು ಕ.ರಾಪ್ರಾ.ಶಾ.ಶಿ.ಸಂಘ ಸೇಡಂ.ರವಿರಾಜ ಆವಂಟಿ. ನಿರ್ದೇಶಕರು. ಕ. ರಾ. ಸ. ನೌ. ಸಂ. ಸೇಡಂ. ರವರು ಆಗಮಿಸಲಿದ್ದಾರೆ.
ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿ ಅವರ ಉಪಸ್ಥಿತಿಯಲ್ಲಿ
ಸಿದ್ದಪ್ಪ ತಳ್ಳಳ್ಳಿ ಅಧ್ಯಕರು ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಸೇಡಂ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಗೀತ ಸೇವೆಯನ್ನು ಹಣಮಂತ ಮುಖ್ಯಗುರುಗಳು ಸ. ಹಿ. ಪ್ರಾ. ಶಾಲೆ ಜಾಕನಪಲ್ಲಿರವರ ತಂಡವರು ನಡೆಸಿಕೊಡುವರು. ಕಾರ್ಯಕ್ರಮದ ನಿರೂಪಣೆ ಲಕ್ಷ್ಮಣ ರಂಜೋಳಕರ ರವರು ವಹಿಸಿಕೊಂಡಿರುವರೆಂದು
ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಸೇಡಂನ ಕಾರ್ಯದರ್ಶಿಗಳಾದ ಮಹಿಪಾಲರೆಡ್ಡಿ ಮುನ್ನೂರುರವರು ತಿಳಿಸಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.