ಚಿಕ್ಕೋಡಿ: ಹನುಮ ಜಯಂತಿ ಪ್ರಯುಕ್ತ ಚಿಕ್ಕೋಡಿ ಪಟ್ಟಣದಿಂದ ಸುಕ್ಷೇತ್ರ ತೋರಣಹಳ್ಳಿ ಶ್ರೀ ಹನುಮಾನ ದೇವಸ್ಥಾನದವರೆಗೆ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಸುಮಾರು 5 ಸಾವಿರ ಭಕ್ತರು ಹನುಮ ಪಾದಯಾತ್ರೆ ನಡೆಸಿ ಭಕ್ತಿಭಾವ ಮೆರೆದರು.
ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣ ಹತ್ತಿರ ಸೇರಿದ ಭಕ್ತರು ಬಸವ ಸರ್ಕಲ್, ಹಾಲಟ್ಟಿ ಚಿನ್ನವರ ಕ್ರಾಸ್, ಚೆನ್ಯಾನದಡ್ಡಿ ಜೈನಾಪುರ ಮಾರ್ಗವಾಗಿ ಸುಮಾರು 14 ಕಿಮೀ ದೂರ ಹನುಮ ಪಾದಯಾತ್ರೆ ನಡೆಯಿತು. ಶಾಸಕ ಗಣೇಶ ಹುಕ್ಕೇರಿ ಅವರಿಂದ 25 ಕೆಜಿ ಬೆಳ್ಳಿಯ ಕವಚದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮಾರ್ಗಮಧ್ಯದಲ್ಲಿ ಭಕ್ತರಿಗೆ ಅಲ್ಲೋಪ ಹಾರ, ತಂಪು ನೀರು, ಹಣ್ಣಿನ ಹಣ್ಣಿನ ಜ್ಯೂಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷವಾಗಿ ಮುಸ್ಲಿಂ ಬಾಂಧವರು ಹನುಮ ಭಕ್ತರಿಗೆ ಕಲ್ಲಂಗಡಿ ಹಣ್ಣಿನ ವ್ಯವಸ್ಥೆ ಕಲ್ಪಿಸಿದ್ದರು. ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನಕ್ಕೆ ತಲುಪಿದ ಪಾದಯಾತ್ರೆ ಯನ್ನು ಹಾಗೂ 25 ಕೆಜಿ ಬೆಳ್ಳಿಯ ಕವಚವನ್ನು ದೇವಸ್ಥಾನ ಕಮಿಟಿಯವರು ಭವ್ಯವಾಗಿ ಸ್ವಾಗತಿಸಿದರು.
10 ಅಡಿಯ ಕಲ್ಲಿನ ಹನುಮಾನ ಮೂರ್ತಿ ಮತ್ತು 45 ಲಕ್ಷ ರೂ. ವೆಚ್ಚದ ದೇವಸ್ಥಾನದ ಮೇಲ್ಟಾವಣಿಯನ್ನು ರಾಜ್ಯ
ಚಿಕ್ಕೋಡಿಯಿಂದ ಸುಕ್ಷೇತ್ರ ತೋರಣಹಳ್ಳಿ ಹನುಮಾನ ದೇವಸ್ಥಾನದವರೆಗೆ ಭಕ್ತರೊಂದಿಗೆ ಶಾಸಕ ಗಣೇಶ ಹುಕ್ಕೇರಿ ಹನುಮ ಪಾದಯಾತ್ರೆ ನಡೆಸಿದರು.
ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು. ಶ್ರೀ ಅನ್ನಪೂರ್ಣೇಶ್ವರಿ ಫೌಂಡೇಶನ್ನಿ ಫೌಂಡೇಶನ್‌ನಿಂದ 25 ಸಾವಿರ ಭಕ್ತರಿಗೆ ಮಹಾಪ್ರಸಾದಕ್ಕೆ ಸ್ವಾಮೀಜಿಗಳು ಚಾಲನೆ ನೀಡಿದರು.
ನಂತರ ನಡೆದ ವೇದಿಕೆ ಕಾಯಕ್ರಮದಲ್ಲಿ ಮಾತನಾಡಿದ ಪ್ರಕಾಶ ಹುಕ್ಕೇರಿ, ತೋರಣಹಳ್ಳಿ ದೇವಸ್ಥಾನ ಅಭಿವೃದ್ಧಿ ಯಾಗಲು ನಾನು ಮತ್ತು ಶಾಸಕ ಗಣೇಶ ಹುಕ್ಕೇರಿ ಭಕ್ತಿಭಾವದಿಂದ ಪ್ರಯತ್ನಮಾಡು ತ್ತೇವೆ. ದೇವಸ್ಥಾನದ ಜೀರ್ಣೋದ್ದಾರಕ್ಕೆ 20 ಲಕ್ಷರೂ ಅನುದಾನ ಕೊಡಲಾಗುತ್ತದೆ. ದೇವಸ್ಥಾನದ ಸುತ್ತಮುತ್ತ ರಸ್ತೆ ಅಭಿವೃದ್ಧಿಗೆ 4 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿ ನಿಂದ ಪ್ರಯತ್ನ ಮಾಡೋಣ ಎಂದು ಹೇಳಿದರು. ಚರಮೂರ್ತಿಮಠದ ಸಂಪಾ ದನ ಸ್ವಾಮೀಜಿ, ಸದಲಗಾ ಶ್ರದ್ದಾನಂದ ಸ್ವಾಮೀಜಿ, ಕುಮಾರ ಪಾಟೀಲ, ರವಿ ಮಿರ್ಜಿ, ಪಿ.ಐ. ಕೋರೆ, ರಾಮಾ ಮಾನೆ, ಅನಿಲ ಮಾನೆ, ಇರ್ಫಾನ್ ಬೇಪಾರಿ, ಸಾಬೀರ ಜಮಾದಾರ, ಗುಲಾಬ ಬಾಗ ವಾನ, ಅನಿಲ ಪಾಟೀಲ, ವಿನೋದ ಕಾಗೆ, ರಾಜು ಕರಾಳೆ, ಸುನೀಲ ಸಪ್ತಸಾಗರೆ, ಉಮೇಶ ಸಾತ್ವರ, ರಾಮಗೌಡ ಸಣ್ಣಲಚ್ಚಾಪ್ಪಗೋಳ, ಭೀಮಾ ಸಣ್ಣಲಚ್ಛಾಪ್ಪಗೋಳ, ಬಸು ಮಾಳಗೆ, ಮಲಗೌಡ ಪಾಟೀಲ, ಬಾಲಕೃಷ್ಣ ದೊಡ್ಡಲಚಚ್ಚಾಪ್ಪಗೋಳ ತೋರಣಹಳ್ಳಿ ಗ್ರಾಮಸ್ಥರು ಹಾಗೂ ಇನ್ನಇತರರು ಉಪಚುತರಿದ್ದರು.
ವರದಿ: ರಾಜು ಮುಂಡೆ




