ಬೆಂಗಳೂರು: – ಈಗಿನ ಪರಿಸ್ಥಿತಿಯಲ್ಲಿ ಬೆಂಗಳೂರುನಲ್ಲಿ ಮನುಷ್ಯನ ಬದುಕಿನಲ್ಲಿ ದಿನನಿತ್ಯ ಕಾಯಕ ಪುರುಷ ಲಕ್ಷಣ ಎಂದಾಗೆ ಶ್ರಮಿಸುವುದು ಅಗತ್ಯವಿದ್ದು ಆ ನಿಟ್ಟಿನಲ್ಲಿ ಪುಣ್ಯ ಪವಿತ್ರ ಕ್ಷೇತ್ರಗಳಿಗೆ ಮತ್ತು ಶುಭ ಸಮಾರಂಭಕ್ಕೆ ಹೋಗುವುದು ಸಹಜ ಆದರೆ ಇಂತಹ ಪ್ರದರ್ಶನಗಳು ನೋಡುವುದರಿಂದ ಮನುಷ್ಯನಿಗೆ ಕಾಯಿಲೆ ವಾಸಿ ಆಗುತ್ತಿವೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹನುಮಂತರಾಜು ಹೇಳಿದರು.
ಅವರು ಪೀಣ್ಯ ೨ನೇ ಹಂತದಲ್ಲಿರುವ ಶ್ರೀ ರಾಮ ದೇವಸ್ಥಾನ ಪಕ್ಕದಲ್ಲಿ ಮುನಿಗಂಗಪ್ಪ ಮೈದಾನದಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಅಂಡರ್ ವಾಟರ್ ಫಿಶ್ ಟನಲ್ ಫಿಶ್ ಅಕ್ವೇರಿಯಂ ಎಕ್ಸ್ಪೋ, ಅಮ್ಯೂಸ್ ಮೆಂಟ್ ಮತ್ತು ವಸ್ತು ಪ್ರದರ್ಶನದ ಕಂಪನಿ ಮಾಲೀಕ ನವೀನ್ ಕುಮಾರ್ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಿಬ್ಬನ್ ಕತ್ತರಿ ಉದ್ಘಾಟಿಸಿ ಮಾತನಾಡಿದರು.
ರಾಜಗೋಪಾಲ ನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಿಬಿಎಂಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಜಗದೀಶ್ ಕುಮಾರ್ ಮಾತನಾಡಿ ಈ ಪ್ರದರ್ಶನದಲ್ಲಿ ವಿವಿಧ ತಳಿಯ ಮತ್ತು ಬಣ್ಣ ಬಣ್ಣದ ಮೀನುಗಳು (ವಿವಿಧ ಜಾತಿಯ ಮೀನುಗಳು),ಆಕರ್ಷಣೆ ಚಿಕ್ಕವರಿಂದ ದೊಡ್ಡವರವರೆಗೆ ಆಟಿಕೆಗಳು,ತಿಂಡಿ ತಿನಿಸುಗಳು , ವಿಶೇಷ ಮಹಿಳೆಯರಿಗೆ ತರತರದ ವಸ್ತುಗಳು ವ್ಯಾಪಾರ ಮಳಿಗೆಗಳು ಎದ್ದು ಕಾಣುತ್ತಿದ್ದವು ಒಟ್ಟಿನಲ್ಲಿ ಸಾರ್ವಜನಿಕರಿಗೆ ಮನೋರಂಜನೆಯಿಂದು ಆನಂದ್ ಪಟ್ಟರು ಎಂದು ಬಿ.ಜಗದೀಶ್ ಕುಮಾರ್ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಚೈತ್ರ ಬಿ ಆರ್ ಮತ್ತು ಡಾ.ಬಿ ಎಂ ಬಳ್ಳಾರಿ ಮಾತನಾಡಿದರು.
ಮಾಲೀಕ ನವೀನ್ ಕುಮಾರ್ ರವರು ಸರ್ವರಿಗೂ ಸ್ವಾಗತ ಕೋರಿ ಮುತ್ತು ಕುಮಾರ್ , ಕನ್ನಿಮೋಳಿ, ರಾಜೇಂದ್ರ,ಚಂದ್ರನ್, ಇವರುಗಳು ನನಗೆ ಸಾಥ್ ನೀಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಯುವ ಮುಖಂಡ ಕಿಶೋರ್ ಕುಮಾರ್, ಮೋಹನ್ ಕುಮಾರ್, ನಾರಾಯಣ್,ರಾಜು ಸೇರಿದಂತೆ ಸಾರ್ವಜನಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್