ಬೆಂಗಳೂರು: ಹಾಡು ಹಾಡುತ್ತಾ ಜನರಿಗೆ ಮನರಂಜನೆ ನೀಡುತ್ತಿದ್ದ ಕುರಿಗಾಹಿ ಹನುಮಂತ ಈ ಸಲದ ಬಿಗ್ಬಾಸ್ ಸೀಸನ್ 11ರ ಟ್ರೋಫಿ ಮುಡಿಗೇರಿಸಿಕೊಂಡಿದ್ದಾನೆ.
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ.ಹನುಮಂತ ಬಂದಮೇಲೆ ಬಿಗ್ಬಾಸ್ ನೋಡುತ್ತಿದ್ದ ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿತ್ತು. ಇದೀಗ ಹನುಮಂತ ಬಿಗ್ಬಾಸ್ ಸೀಸನ್ 11ರ ಟ್ರೋಫಿ ಗೆದ್ದು ಬೀಗಿದ್ದಾನೆ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಇದೀಗ ಫಿನಾಲೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಒಟ್ಟು 5,23,89,318 ವೋಟುಗಳನ್ನು ಪಡೆದುಕೊಂಡು ಟ್ರೋಫಿಗೆ ಮುತ್ತಿಕ್ಕಿದ್ದಾನೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಕಾರ್ತಿಕ್ ಮಹೇಶ್ ಅವರು 2 ಕೋಟಿ 98 ಲಕ್ಷ ಮತಗಳನ್ನು ಪಡೆದಿದ್ದರು. ಈ ಬಾರಿ ಇಷ್ಟು ಮತಗಳನ್ನು ಫಸ್ಟ್ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಅವರು ಪಡೆದುಕೊಂಡಿದ್ದಾರೆ.