——————————————————ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಅಥಣಿ: ತಾಲೂಕಿನ ಸುಟ್ಟಟ್ಟಿ ಗ್ರಾಮದ ಸಮಾಜದ ಕಾರ್ಯಕರ್ತರು ಸರಳ ಜೀವಿ ಹಾಗೂ ತಾಲೂಕ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಹನುಮಂತ ಅರ್ದಊರ ಅವರ 38ನೇ ಹುಟ್ಟುಹಬ್ಬವನ್ನು ಸಮಾಜದ ಬಾಂಧವರು ಗಣ್ಯಮಾನ್ಯರು ಹಾಗೂ ಅಭಿಮಾನ ಬಳಗದವರು ವತಿಯಿಂದ ಹಮ್ಮಿಕೊಂಡ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.

ನಂತರ ರಾಜೇಂದ್ರ ಐಹೊಳಿ ಅವರು ಮಾತನಾಡಿ ಹನುಮಂತ ಅರ್ಧವಾರ್ ಅವರು 38ನೆಯ ಹುಟ್ಟುಹಬ್ಬವನ್ನು ಅನಾಥ ಆಶ್ರಮ ಹಾಗೂ ವೃದ್ಧಾಶ್ರಮ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡೋ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಅವರು ಇನ್ನಷ್ಟು ಎತ್ತರಮಟ್ಟಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು.
ನಂತರ ಸುನೀತಾ ಐಹೊಳೆ ಅವರು ಮಾತನಾಡಿ ಪ್ರತಿವರ್ಷ ಏನಾದ್ರೂ ಹೊಸ ಹೊಸ ವಿಚಾರದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಸಂತೋಷದಾಯಕವಾಗಿದೆ. ಅವರ ಜೀವನ ಉದ್ದಕ್ಕೂ ತಮ್ಮ ವಿಚಾರಧಾರೆಯಂತೆ ಇನ್ನಷ್ಟು ಎತ್ತರ ಮಟ್ಟಿಗೆ ಬೆಳೆಯಲಿ ದೇವರು ಅವರಿಗೆ ಆರೋಗ್ಯ ಆಯಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಹನುಮಂತ ಅರ್ದಊರ ಅವರು ಮಾತನಾಡಿ ನನ್ನ ಹುಟ್ಟುಹಬ್ಬವನ್ನು ತಾವೆಲ್ಲರೂ ಸೇರಿ ಆಚರಣೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹೀಗೆ ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ರಾವಸಾಬ. ಕುಮಾರ್ ಗಸ್ತಿ.. ರಾಜು ರಾಜನ್ಗಳೇ. ಆನಂದ್ ಮಾದರ್. ಸಂತೋಷ ಆದಿಮನಿ. ಅನಿಲ್ ಕಾಂಬ್ಳೆ. ಆದರ್ಶ ಗಸ್ತಿ ರೋಹಿತ್ ಗಸ್ತಿ ಎಂ ಆರ್ ಹಲಸಂಗಿ. ಮಾರುತಿ ಸಂಗಮ್. ಅಜಿತ್ ಬೆಳ್ಳಂಕಿ ದಾನಪ್ಪ ಮಾಳಿ ಮಾದೇವ್ ಮಾದಿ. ಸದಾಶಿವ್ ಮಸಾಲಳೆ. ಉಮೇಶ್ ಗಸ್ತಿ. ಪ್ರಕಾಶ್ ಶಿನಾಳ್. ಮಹಾಂತೇಶ ಗಸ್ತಿ. ಅಜಿತ್ ದುರ್ಗಾಗಾವಿ ಇನ್ನಿತರ ಭಾಗವಹಿಸಿದರು.
ವರದಿ: ರಾಜು ವಾಘಮಾರೆ




