ಸೇಡಂ: ಒಬ್ಬ ವ್ಯಕ್ತಿ ತಾನು ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಪಡಬೇಕು. ಒಬ್ಬ ಹೆಣ್ಣು ಮಗಳು ಕಠಿಣ ಪರಿಶ್ರಮ ಪಡುತ್ತಿರುವ ಸಂದರ್ಭದಲ್ಲಿ ಅವಮಾನಗಳು ಸಹಜವಾಗಿ ಬರುತ್ತವೆ ಅವಮಾನಗಳನ್ನು ಸನ್ಮಾನಗಳಾಗಿ ಪರಿವರ್ತನೆ ಮಾಡಬೇಕಾದರೆ ಕಠಿಣ ಪರಿಶ್ರಮ ಮುಖ್ಯ ಎಂದು ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ದಕ್ಷಿಣಕನ್ನಡ ಶ್ರೀಮತಿ ಜಯಲಕ್ಷ್ಮಿ ರಾಯಕೋಡ ಕೆಎಎಸ್ ಹೇಳಿದರು.ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾದೇವಿ ಗಿಲಡಾ ಸರ್ವ ಪ್ರಕಲ್ಪಗಳ ಸಂಕುಲ ವತಿಯಿಂದ ಹಮ್ಮಿಕೊಂಡಿರುವ ಉನ್ನತ ಧ್ಯೇಯ ಉನ್ನತ ಮಹಿಳೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಈ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ತಾವು ರಾಯಕೋಡ ಗ್ರಾಮದಲ್ಲಿ ಜನಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಲು ಕೊತ್ತಲ ಬಸವೇಶ್ವರ ಸಂಸ್ಥೆ ನೀಡಿದ ಶಿಕ್ಷಣ ಮತ್ತು ಸಂಸ್ಕಾರವೇ ಕಾರಣ ಎಂದು ಸಂಸ್ಥೆಗೆ ಕೃತಜ್ಞತೆಗಳು ಸಲ್ಲಿಸಿದರು. ಶಿಕ್ಷಣ ಪಡೆಯುವ ಸಂದರ್ಭದಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ಓದುವುದರ ಜೊತೆಗೆ ಬರವಣಿಗೆ ಬಹಳ ಮಹತ್ವ ನೀಡಬೇಕು.ಇಂದಿನ ತಾಂತ್ರಿಕ ಕಾಲದಲ್ಲಿ ಬರವಣಿಗೆ ಕಡಿಮೆಯಾಗುತ್ತಿದೆ.ಆದರೆ ಬರವಣಿಗೆ ಇಲ್ಲದೆ ಪಡೆದ ಶಿಕ್ಷಣ ಅರ್ಥಪೂರ್ಣವಾಗಲಾರದು. ಇಂದು ಸ್ಮಾರ್ಟ್ ಫೋನ್ ಬಳಕೆಯಿಂದ ಕಲಿಕೆಯಿಂದ ದುಷ್ಪರಿಣಾಮ ಬೀರುತ್ತದೆ ಆದರಿಂದ ಫೋನ್ ಬಳಕೆಯಿಂದ ದೂರವಿರಲು ಸೂಚಿಸಿದರು. ಪ್ರೌಢಶಾಲೆಯಿಂದಲೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅನಿಲಕುಮಾರ ಬುಳ್ಳಾ ಅವರು ಮಾತಾಡುತ್ತಾ ಹೆಣ್ಣು ಮನಸು ಮಾಡಿದರೆ ಅವಳು ಏನು ಬೇಕಾದರೂ ಸಾಧಿಸುತ್ತಾಳೆ, ಎಂಬಂತೆ ಹೆಣ್ಣು ಛಲ, ಧೈರ್ಯ,ಸಾಹಸ ಮತ್ತು ಕಾರ್ಯಗಳಲ್ಲಿ ಪುರುಷನಿಗೆ ಯಾವುದಕ್ಕೂ ಕಡಿಮೆಯಿಲ್ಲ ಅದಕ್ಕಾಗಿ ಹೆಣ್ಣು ಮಕ್ಕಳು ಸತತ ಅಭ್ಯಾಸ, ನಿರ್ಧಿಷ್ಟ ಗುರಿ ಇಟ್ಟುಕೊಂಡು ಅಧ್ಯನಗೈದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಅಲ್ಲದೆ ಐಎಎಸ್ ಮತ್ತು ಕೆಎಎಸ್ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಾಪು ಬಿ ಜೋಷಿ ಅವರು ಉನ್ನತ ಮಹಿಳೆಯರ ಗುಣಗಳು ಪ್ರತಿಯೊಬ್ಬ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯದರ್ಶಿಗಳಾದ ಶ್ರೀಮತಿ ಅನುರಾಧ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯ ಮಾತನಾಡಿದ ಅವರು ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ, ಮುಖ್ಯ ಅತಿಥಿಗಳು, ಸಂಪನ್ಮೂಲ ವ್ಯಕ್ತಿಗಳು ನೀಡಿರುವ ಸಲಹೆಗಳು ಮತ್ತು ಯಶಸ್ಸಿಗಾಗಿ ಮಾಡುವ ಪ್ರಯತ್ನಗಳು ತಾವು ತಮ್ಮ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು ಎಂದರು.ಕಾರ್ಯಕ್ರಮದಲ್ಲಿ ಸಾಧನೆಗೈದ ಮತ್ತು ಸರ್ಕಾರಿ ಉದ್ಯೋಗವನ್ನು ಪಡೆದ ಹಿರಿಯ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು.ಶ್ರೀಮತಿ ನಾಗಜ್ಯೋತಿ ಕಡಬಗಾಂವ ಪ್ರಧಾನ ಅಧ್ಯಾಪಕರು ಪ್ರಾಸ್ತಾವಿಕ.ಶ್ರೀಮತಿ ಜಗದೀಶ್ವರಿ ಯರಗೋಳ ನಿರೂಪಣೆ,ಶಿವಲೀಲಾ ಜೀವಣಗಿ ಪ್ರಾರ್ಥನಾ ಗೀತೆ
ಶ್ರೀಮತಿ ಆರತಿ ಕಡಗಂಚಿ ಸ್ವಾಗತ.ಶ್ರೀಮತಿ ಅನಂತಮ್ಮ ರೆಡ್ಡಿ ಸಾಧಕ ಸನ್ಮಾನ ಪಟ್ಟಿ ವಾಚನ,ಶ್ರೀಮತಿ ವಿಜಯಲಕ್ಷ್ಮಿ ವಂದನಾರ್ಪಣೆಗೈದರು.
ಸಂಸ್ಥೆಯ ಪದಾಧಿಕಾರಿಗಳು,ಆಡಳಿತಾಧಿಕಾರಿಗಳು,ಶೈಕ್ಷಣಿಕ ಸಂಯೋಜಕರು, ಸಂಸ್ಥೆಯ ಹಿರಿಯ ಸೇವಾಬಳಗ,ಪಾಲಕರು, ಸೇವಾಬಳಗ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




