ದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮದ್ಯಮ ಕ್ರಮಾಂಕದ ಬ್ಯಾಟುಗಾರ ಹರಿ ಬ್ರೋಕ್ ಮುಂದಿನ ತಿಂಗಳು ಆರಂಭವಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.
ಇಂಗ್ಲೆಂಡ್ ದೇಶಿಯ ಕ್ರಿಕೆಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಹರಿ ಬ್ರೋಕ್ ಈ ನಿರ್ಧಾರ ಕೈಗೊಂಡಿದ್ದಾರೆ. ಹರಿ ಬ್ರೋಕ್್ ಅವರು ‘ದಿಲ್ಲಿ ಕ್ಯಾಪಿಟಲ್ಸ್’ಗೆ ಆಡಲಿದ್ದರು. ಅವರು 6.25 ಕೋಟಿಗೆ ಖರೀದಿಯಾಗಿದ್ದು,ತಂಡಕ್ಕೆ ಭರವಸೆಯ ಮದ್ಯಮ ಕ್ರಮಾಂಕದ ಬ್ಯಾಟುಗಾರ ಎನ್ನಿಸಿದ್ದರು.




