ಬೆಳಗಾವಿ:-ಕರ್ನಾಟಕ ರಾಜ್ಯದ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿ ಅದ್ಯಾಕೋ ಏನೋ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ Pwd, prd ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿ ಅಪಘಾತಗಳ ಹಾಟ್ ಸ್ಪಾಟ್ ಗಳಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಬಡಸ ಕತ್ರಿಯಿಂದ ಕುಕಡೊಳ್ಳಿ ಮಾರ್ಗವಾಗಿ ಸಂಚರಿಸುವಾಗ ಮಾರ್ಗ ಮದ್ಯೆ ದೊಡ್ಡ ದೊಡ್ಡ ಗುಂಡಿಗಳಾಗಿ ವಾಹನಗಳು ಈ ಗುಂಡಿಗಳ ಮೂಲಕ ಸಂಚಾರ ಮಾಡುವುದಕ್ಕೂ ಹರಸಾಹಸ ಪಡಬೇಕಾಗಿದೆ.
ಇನ್ನೂ ಈ ಗುಂಡಿಗಳ ಮೂಲಕ ಹಾದು ಹೋಗುವಾಗ ವಾಹನಗಳು ಸಹ ಪಲ್ಟಿಯಾಗಿವೆ. ದಿನನಿತ್ಯ ಈ ಗುಂಡಿಗಳ ಮೂಲಕ ಹಾದುಹೋಗುವಾಗ ಅಪಘಾತಗಳು ಕಾಮನ್ ಆಗಿ, ಬೀಳೋದು, ಏಳೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕಳೆದ 4 ವರ್ಷಗಳಿಂದ ಈ ಗುಂಡಿಗಳು ಹೀಗೆ ಇದ್ದು ಈಗ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಈ ಗುಂಡಿಗಳು ಲೋಕೋಪಯೋಗಿ ಇಲಾಖೆ ರಸ್ತೆಯ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಸಹ ಇಲ್ಲಿನ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರು ಮಾತ್ರ ತಗ್ಗು ಗುಂಡಿಗಳನ್ನು ಮುಚ್ಚುವುದಕ್ಕೆ ಪ್ರಯತ್ನವೇ ಮಾಡ್ತಾ ಇಲ್ಲಾ,
ಇನ್ನೂ ಇದಲ್ಲದೇ ಬಡಸ ಕತ್ರಿಯಿಂದ ಬ್ಯಾಂಕ್ ಆಫ್ ಇಂಡಿಯಾ ವರೆಗಿನ ರಸ್ತೆ ಹಾಗೂ ಕುಕಡೊಳ್ಳಿ ಕತ್ರಿಯಿಂದ ಕುಕಡೊಳ್ಳಿ ಗ್ರಾಮಕ್ಕೆ ಸಂಪರ್ಕ ಮಾಡುವ ರಸ್ತೆ ಹಾಗೂ ಕುಕಡೊಳ್ಳಿಯಿಂದ Mk ಹುಬ್ಬಳ್ಳಿ ಗೆ ಸಂಪರ್ಕ ಮಾಡುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳು ತುಂಬಾನೇ ತಗ್ಗುಗುಂಡಿಗಳಾಗಿ ಈ ಭಾಗದಲ್ಲಿ ದಿನನಿತ್ಯ ಸಂಚಾರ ಮಾಡುವ ವಾಹನಗಳ ಚಾಲಕರು ಮತ್ತು ಪ್ರಯಾಣಿಕರು ಹಿಡಿ ಶಾಪ ಹಾಕ್ತಾ ಇದ್ದಾರೆ.
ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಕ್ಷೇತ್ರದ ಶಾಸಕರು ಹಾಗೂ ಗೌರವಾನ್ವಿತ ಸಚಿವರಾದ ಲಕ್ಶ್ಮೀ ಹೆಬ್ಬಾಳ್ಕರ್ ಮೇಡಂ
ಅವರು ಈ ಗುಂಡಿಗಳಿಗೆ ಮುಕ್ತಿ ನೀಡುವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.