ಬೆಂಗಳೂರು : ಪ್ರತಿಯೋಬ್ಬ ಪುರುಷನ ಯಶಸ್ಸಿನ ಹಿಂದೆ ತಾಯಿ ಸ್ವರೂಪಿ ಮಹಿಳೆಯರು ಇದ್ದಾರೆ ಅಕ್ಕ- ತಂಗಿಯಾಗಿ, ತಾಯಿಯಾಗಿ ಮತ್ತು ಗೆಳತಿಯಾಗಿ ಪ್ರತಿ ಗಂಡಸಿನ ಬದುಕಿನ ಯಶಸ್ಸನ್ನು ಬಯಸುವಳು ಹೆಣ್ಣು ಮಹಿಳೆ ಮಹಿಳೆಯರ ಬದುಕಿಗೆ ಪ್ರೋತ್ಸಾಹ ಅಗತ್ಯ ಎಂದು ಸಹಾಯ ಹಸ್ತ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ರುದ್ರೇಗೌಡ್ರು ಹೇಳಿದರು.
ಅವರು ರಾಜಗೋಪಾಲನಗರ ವಾರ್ಡಿನ ಸಮುದಾಯದ ಭವನದಲ್ಲಿ ಓಂ ಶಕ್ತಿ ಪೂಜಾ ಮಂಡಳಿಯ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯ ಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅವರು ಪುರುಷ ಬದುಕು ಹಸನಾಗಿ ಬೇಕಾದರೆ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಮಹಿಳೆಯರನ್ನು ಉದ್ದೇಶಿಸಿ ಡಾ. ರುದ್ರೇಗೌಡ್ರು ಮಾತಾಡಿದರು.
ಇದೆ ವೇಳೆ ಮಹಿಳೆಯರು ಸೇರಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಿ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ನೆನಪಿನ ಕಾಣಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ದಾಸರಹಳ್ಳಿ ನಗರ ಸಭಾ ಮಾಜಿ ಅಧ್ಯಕ್ಷ ಅಂದಾನಪ್ಪ, ರಾಜಗೋಪಾಲನಗರ ವಾರ್ಡಿನ ಜೆಡಿಎಸ್ ಅಧ್ಯಕ್ಷ ತಿಮ್ಮರಾಜು, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಜಯಣ್ಣ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಮೋಹನ್ ಕುಮಾರ್, ಓಂ ಶಕ್ತಿ ಪೂಜಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್