ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ವಿದೇಶದಿಂದ ಮಂಗಳೂರು ಏರ್‌ಪೋರ್ಟ್ ಗೆ ಆಗಮಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಹಿಳೆ ಕಿಡ್ನಾಪ್ ಕೇಸ್ ಅಲ್ಲಿ ಹನಿನ್ನೆ ಅವರ ತಂದೆ ಹಾಗೂ ಜೆಡಿಎಸ್ ಶಾಸಕರಾದಂತಹ ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ಇದೀಗ ಲೈಂಗಿಕ ದೋರ್ಷಣೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಇಂದು ಮಂಗಳೂರು ಏರ್‌ಪೋರ್ಟ್ ಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣಗೆ ಉದಾರಣೆಗೆ ಹಾಜರಾಗುವಂತೆ ಲುಕ್ ಔಟ್ ನೋಟಿಸ್ ನೀಡಿದ್ದು, ವಿದೇಶದಲ್ಲಿರುವ ಕಾರಣ ಪ್ರಜ್ವಲ್ ವಿಚಾರಣೆಗೆ ಹಾಜರಾಗುವುದಕ್ಕೆ ಸಾಧ್ಯವಾಗಿಲ್ಲ ಹಾಗಾಗಿ ನಿನ್ನೆ ಎಸ್ ಐ ಟಿ ಅಧಿಕಾರಿಗಳು ರೆಡ್ ಕಾರ್ನರ್ ನೋಟಿಸ್ ಜರಿ ಮಾಡಿತ್ತು ಹಾಗಾಗಿ ಇಂದು ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ವಾಪಸ್ಸಾಗಿ ಮಂಗಳೂರಿನ ಏರ್ಪೋರ್ಟಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ದೇಶದಿಂದ ದೇಶಕ್ಕೆ ಸಂಚರಿಸುತ್ತಿದ್ದಾರೆ ಎಂದು ಮಾಹಿತಿ ಇದು ಹಾಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲಾ ವಿಮಾನ ನಿಲ್ದಾಣಗಳಿಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಹೀಗಾಗಿ ಅವರು ನೇರವಾಗಿ ಮಂಗಳೂರು ಮಾನ್ಯುದಾನಕ್ಕೆ ಆಗಮಿಸುವ ಸಾಧ್ಯತೆ ಇದ್ದು ಬಂದ ತಕ್ಷಣ ಅವರನ್ನು ಎಸ್ ಐ ಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೋ ಅಥವಾ ಬಂಧಿಸುತ್ತಾರೋ ಎಂಬುದು ಕಾದುನೋಡಬೇಕಾಗಿದೆ.