Ad imageAd image

ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಮಾಡದೆ ಅಪಮಾನ ಮಾಡಿದ : ಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು

Bharath Vaibhav
ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಮಾಡದೆ ಅಪಮಾನ ಮಾಡಿದ : ಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು
WhatsApp Group Join Now
Telegram Group Join Now

ಲಿಂಗಸ್ಗೂರು : ದೇಶಾದ್ಯಂತ ಸವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ 134ನೇ ಜಯಂತಿಯನ್ನು ಆಚರಣೆಯಲ್ಲಿ ಸಂಭ್ರಮದಲ್ಲಿದ್ದರೆ, ಇಂಥ ಮಹಾ ನಾಯಕನ ಜಯಂತಿ ಅಂಗವಾಗಿ ಸರಕಾರವು ಎಲ್ಲಾ ಇಲಾಖೆಗಳಿಗೆ ರಜೆ ಘೋಷಿಸಲಾಗಿದ್ದು, ಎಲ್ಲಾ ಸರಕಾರಿ ಮತ್ತು ಖಾಸಗಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ.

ದೇಶಕ್ಕೆ ಸವಿಧಾನ ನೀಡಿದ ಮಹಾ ನಾಯಕನ ಜಯಂತಿಯನ್ನು ನಿರ್ಲಕ್ಷಿಸಿದ ಹಟ್ಟಿ ಚಿನ್ನದ ಗಣಿ ಪಟ್ಟಣದ ಕೆನರಾ ಬ್ಯಾಂಕ್, ಎಸ್ ಬಿ ಐ ಬ್ಯಾಂಕ್ , ಕೃಷ್ಣ ಗ್ರಾಮೀಣ ಬ್ಯಾಂಕ್, ಮ್ಯಾನೇಜರ್ ಮತ್ತು ಸಿಬ್ಬಂದಿಗಳು,ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ನನಗೂ ಅದಕ್ಕೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಈ ಮೂರು ರಾಷ್ಟ್ರೀಕೃತ ಬ್ಯಾಂಕ್ ಗಳ ಅಧಿಕಾರಿಗಳು ನಿರ್ಲಕ್ಷಿಸಿದ್ದು ನೋಡಿದರೆ ಉದ್ದೇಶಪೂರ್ವಕವಾಗಿ ಮಹಾ ನಾಯಕನಿಗೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗಿದೆ ಜಯಂತಿ ಮಾಡದೆ ಇರುವುದನ್ನು ಗಮನಿಸಿದ ದಲಿತಪರ ಸಂಘಟನೆಗಳು ಸ್ಥಳೀಯ ಬ್ಯಾಂಕುಗಳ ಹತ್ತಿರ ಹೋಗಿ ಸಂಬಂಧಪಟ್ಟ ಮ್ಯಾನೇಜುಗಳಿಗೆ ದೂರವಾಣಿ ಮೂಲಕ ಮಾತನಾಡಿದಾಗ ಅವರಿಂದ ಒಂದು ರೀತಿ ಬೇಜವಾಬ್ದಾರಿ ಉತ್ತರ ಬಂದಿದೆ ಎಂದು ತಿಳಿದು ಬಂದಿದೆ.

ಕೂಡಲೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ನಿರ್ಲಕ್ಷಿಸಿ ಅವಮಾನ ಮಾಡಿದ ಇಂತ ಕೆನರಾ ಬ್ಯಾಂಕ್,ಎಸ್ ಬಿ ಐ ಬ್ಯಾಂಕ್ , ಕೃಷ್ಣ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಂಥವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ದಲಿತ ಪರ ಸಂಘಟನೆಗಳು ಆಗ್ರಹಿಸಿವೆ,ದಲಿತ ಪರ ಸಂಘಟನೆಯ ಮುಖಂಡರೆಲ್ಲ ಸೇರಿಕೊಂಡು ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.

ಇಂಥ ನಾಲಾಯಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳ ವಿರುದ್ಧ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಇವರನ್ನು ಸೇವೆಯಿಂದ ಅಮಾನತ್ತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಈ ಮೂಲಕ ಎಚ್ಚರಿಸಿದ್ದಾರೆ,
ಈ ಸಂದರ್ಭದಲ್ಲಿ ಹೆಚ್ ಎ ಲಿಂಗಪ್ಪ, ಯೋಗಪ್ಪ ದೊಡ್ಮನಿ, ವಿನೋದ್ ಕಮಲದಿನ್ನಿ, ಶಿವು ತಬಲಾಜಿ, ಶಿವಪುತ್ರ, ವಿಜಯಕುಮಾರ್, ರಾಮಣ್ಣ, ಸುರೇಶ್ ಮಾಚನೂರ್, ನಾಗರಾಜ್, ಶ್ರೀಕಾಂತ್, ಭಗವಂತ, ಮೌನೇಶ್ ಕಾಕಾ ನಗರ ಸೇರಿದಂತೆ ಇನ್ನೂ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಮಧುಶ್ರೀ

WhatsApp Group Join Now
Telegram Group Join Now
Share This Article
error: Content is protected !!