ಸಿಂಧನೂರು : ಜುಲೈ 4 ರಾಯಚೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಸಿಂಧನೂರು ಮತ್ತು ರಾಯಚೂರಿಗೆ ಬಂದಾಗ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೆ ಪರಿಹಾರ ಹಾಗೂ ಸ್ಪಂದನೆ ಮಾತ್ರ ಸಿಕ್ಕಿರುವುದಿಲ್ಲ. ಹಾಗಾಗಿ ಆಗಸ್ಟ್ 6 ರಂದು ಹಟ್ಟಿ ಚಿನ್ನದ ಗಣಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಡ್ಡಗಟ್ಟಿ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರು, ರೈತರು, ಯುವಕರು, ಭೂರಹಿತ ಸಾಗುವಳಿದಾರರು ಹಟ್ಟಿಗೆ ಬರಬೇಕೆಂದು ಈ ಪತ್ರಿಕಾ ಹೇಳಿಕೆಯ ಮೂಲಕ ಕರೆ ನೀಡಲಾಗಿದೆ.

ಎಂ.ಗಂಗಾಧರ ರಾಜ್ಯ ಸಮಿತಿ ಸದಸ್ಯರು ಸಿಪಿಐ(ಎಂಎಲ್)ರೆಡ್ ಸ್ಟಾರ್ ,ಹನುಮಂತಪ್ಪ ಗೋಡಿಹಾಳ
ತಾಲೂಕು ಉಪಾಧ್ಯಕ್ಷರು ,ಕರ್ನಾಟಕ ರೈತ ಸಂಘ ಸಿಂಧನೂರು ಹೆಚ್. ಆರ್. ಹೊಸಮನಿ ಜಿಲ್ಲಾ ಸಮಿತಿ ಸದಸ್ಯರು
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಟಿ ಯು ಸಿ ಐ, ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




