ಚಿನ್ನದ ಗಣಿಗಾಗಿ ಕಾರ್ಮಿಕರು ಪ್ರಾಣವನ್ನೇ ತ್ಯಾಗ ಮಾಡಿರುವುದು ದೇಶಕ್ಕಾಗಿ
ಯೋಧ ಪ್ರಾಣ ತ್ಯಾಗ ಮಾಡಿದಷ್ಟೇ ಶ್ರೇಷ್ಠ : ಸೈಫುಲ್ಲಾ ಖಾನ್
ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಇಂದಿಗೆ 78 ವರ್ಷ ಪೂರೈಸಿ 79ನೇ ವರ್ಷಕ್ಕೆ ಪಾದರಪಣೆ ಮಾಡಿರುವ ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಥಾಪನಾ ವರ್ಷಾಚರಣೆ ಆಚರಿಸಲಾಯಿತು
ಕಂಪನಿಯು ಹಂತ ಹಂತವಾಗಿ ಅಭಿವೃದ್ಧಿ ಪತದತ್ತ ಸಾಗಿ ದೊಡ್ಡಮಟ್ಟದಲ್ಲಿ ಬೆಳೆಯುವಲ್ಲಿ
ಅನೇಕ ಅಧಿಕಾರಿಗಳು ಸಿಬ್ಬಂದಿ ಮತ್ತು ಕಾರ್ಮಿಕರು ತಮ್ಮ ಜೀವನವನ್ನು ಮುಡುಪಾಗಿಟ್ಟು ಶ್ರಮಿಸುತ್ತಾರೆ ಅನೇಕರು ತಮ್ಮ ಆರೋಗ್ಯ ಮತ್ತು ದೇಹ ಅಂಗಾಂಗಗಳನ್ನು ಕಳೆದುಕೊಂಡಿರುತ್ತಾರೆ ಇನ್ನು ಕೆಲವರು ಕರ್ತವ್ಯದ ಅವಧಿಯಲ್ಲಿ ಗಣಿ ಅಪಘಾತದಲ್ಲಿ ತಮ್ಮ ಅಮೂಲ್ಯವಾದ ಪ್ರಾಣವನ್ನು ತ್ಯಾಗ ಮಾಡಿರುತ್ತಾರೆ
ಅವರ ಸ್ಮರಣಾರ್ಥವಾಗಿ ಸದರಿ ಈ ದಿನದಂದು ಬೆಳಗ್ಗೆ 11:00ಗೆ ಕಂಪನಿಯ ಸೈರನ್ ಹಾಕುವ ಮೂಲಕ ಎರಡು ನಿಮಿಷದವರೆಗೆ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು
ಹಟ್ಟಿ ಕಂಪನಿ ಆಸ್ಪತ್ರೆಯ ಒಳರೋಗಿಗಳಿಗೆ 79 ನೇ ವರ್ಷಕ್ಕೆ ಪಾದರ್ಪಣೆ ಮಾಡಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಥಾಪನ ವರ್ಷಾಚರಣೆ ಅಂಗವಾಗಿ ಇಂದು ಕಂಪನಿ ಅಧಿಕಾರಿಗಳು ಒಳ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡುವ ಮೂಲಕ 79ನೇ ವರ್ಷಾಚರಣೆ ಆಚರಿಸಿದರು
ಭಾರತದಲ್ಲಿ ಏಕೈಕ ಚಿನ್ನ ಸಿಗುವ ಚಿನ್ನದ ಗಣಿ ಎಂದು ಹೆಸರು ಪಡೆದಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಅನೇಕ ಕಾರ್ಮಿಕರ ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳ ಶ್ರಮದಿಂದ ಮತ್ತು ಕಾರ್ಮಿಕರು ತಮ್ಮ ಕರ್ತವ್ಯದ ವೇಳೆಯಲ್ಲಿ ಚಿನ್ನದ ಗಣಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ
ಮಾಡಿದ ಪ್ರತಿಫಲವಾಗಿ ಇಂದು 79ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ,
ಕಾರ್ಮಿಕರು ಚಿನ್ನದ ಗಣಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವುದು ಒಬ್ಬ ಯೋಧ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಷ್ಟೇ ಶ್ರೇಷ್ಠವಾದದ್ದು ಎಂದು ಪ್ರಧಾನ ವ್ಯವಸ್ಥಾಪಕರು ಸಮನ್ವಯ ಸೈಫುಲ್ಲಾ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಹಟ್ಟಿ ಕಂಪನಿಯ ಅಧಿಕಾರಿಗಳಾದ ಉಪ ಪ್ರಧಾನ ವ್ಯವಸ್ಥಾಪಕರು ಮಾಸ ಆಡಳಿತ ಯಮನೂರಪ್ಪ, ಜಗನ್ ಮೋಹನ್, ಸುರೇಶ್, ರಮೇಶ್, ವಿಶ್ವನಾಥ್, ಕಾವ್ಯ,
ಹಟ್ಟಿ ಚಿನ್ನದ ಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಚುನಾಯಿತ ಪ್ರತಿನಿಧಿಗಳಾದ ಎಸ್ ಎಂ ಶಫೀ ಪ್ರಧಾನ ಕಾರ್ಯದರ್ಶಿ, ಕೆ ಮಹಾಂತೇಶ್ ಅಧ್ಯಕ್ಷರು, ಶಾಂತಪ್ಪ ಆನ್ವರಿ, ಸಿದ್ದಪ್ಪ ಮುಂಡರಗಿ, ಗುಂಡಪ್ಪ ಗೌಡ ಗುರಿಕಾರ್, ಜಮದಗ್ನಿ ಕೋಠಾ, ನಾಗರಾಜ್, ಚಂದ್ರಶೇಖರ್ ನೆಲಗಿ, ಹನುಮಂತ್ ಗೌಡ ಗುರಿಕಾರ್, ಬಾಬು ಸಾಗರ್, ಪೆಂಚಲಮ್ಮ, ಅಮರೇಶ್, ಮುನಿರುದ್ದೀನ್
ಮತ್ತು ಕಾರ್ಮಿಕ ಮುಖಂಡರಾದ ಮೈನುದ್ದೀನ್, ಸೋಮಣ್ಣ ನಾಯಕ್, ರಮೇಶ್ ವೀರಾಪುರ್, ಅಲ್ಲಾಭಕ್ಷು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




