ಲಿಂಗಸ್ಗೂರು : ಶ್ರೀ ಭಗೀರಥ ನಂದಪೂರಿ ಜಗದ್ಗುರುಗಳು ರಾಂಪುರ ಹಳ್ಳಿ ಇವರ ಆಶೀರ್ವಾದದಿಂದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇವರ ಆದೇಶದ ಮೇರೆಗೆ ಶ್ರೀ ಭಗೀರಥ ಪೀಠ ರಾಂಪುರ ಹಳ್ಳಿ ಸುಕ್ಷೇತ್ರ ದಿಂದ ಶಾಹಪುರ, ಸುರಪುರ, ಗುರುಗುಂಟಾ ಮಾರ್ಗವಾಗಿ ಹಟ್ಟಿ ಚಿನ್ನದ ಗಣಿ ಇಂದ ಹುಬ್ಬಳ್ಳಿಗೆ ತಲುಪಲಿರುವ ಬಸ್ಸು ಇಂದು ಮಧ್ಯಾಹ್ನ 1 ಗಂಟೆಗೆ ಹಟ್ಟಿ ಚಿನ್ನದ ಗಣಿ ಬಸ್ ನಿಲ್ದಾಣದಿಂದ ಶ್ರೀ ಭಗೀರಥನಂದಪುರಿ ಜಗದ್ಗುರುಗಳ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆರ್ ಟಿ ವಿ ಕನ್ನಡ ಸಂಪಾದಕರಾದ ಶ್ರೀನಿವಾಸ್ ಮಧುಶ್ರೀ ಉಪಸಿತರಿದ್ದರು. ಹಟ್ಟಿ ಚಿನ್ನದ ಗಣಿಯಿಂದ ಹುಬ್ಬಳ್ಳಿಗೆ ಹೊರಡುವ ಬಸ್ಸು ಪ್ರತಿದಿನ ಮಧ್ಯಾಹ್ನ 12:30 ರಿಂದ ಒಂದು ಗಂಟೆಯ ಒಳಗೆ ಆಗಮಿಸಲಿದೆ ಹುಬ್ಬಳ್ಳಿಗೆ ಹೋಗುವ ಪಯಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಶ್ರೀನಿವಾಸ ಮಧುಶ್ರೀ ಹಟ್ಟಿ ಚಿನ್ನದ ಗಣಿ