ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣದ ಹಳೆ ಪಂಚಾಯತ್ ಹತ್ತಿರ ಹಟ್ಟಿ ಕಾ ಛೋಟಾ ಮಹಾರಾಜ್ ಗಣೇಶ ಮಂಡಳಿಯಿಂದ ಇಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪುಟ್ಟ ಪುಟ್ಟ ಮಕ್ಕಳು ಗಣೇಶನ ಮೂರ್ತಿಯನ್ನು ಎರಡನೇ ವರ್ಷ ಪ್ರತಿಷ್ಠಾಪಿಸುವ ಮೂಲಕ ಗಣೇಶ್ ಚತುರ್ಥಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದ್ದರು.
ಇಂದು ಹಟ್ಟಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಎಂ.ಡಿ ಸಂಧಾನಿ, ಕಾಂಗ್ರೆಸ್ ಮುಖಂಡರಾದ ಅಮ್ಜದ್ ಸೇಟ್, ರಮೇಶ್ ಹುಳಿಮಹೇಶ್ವರ, ಶಿವು ನಾಯಕ್ ತಬಲಾಜಿ, ಹನುಮಂತ್ ರೆಡ್ಡಿ, ಪರಮೇಶ್ ಯಾದವ್, ಬಸವರಾಜ ಪೈ, ದೇವೇಂದ್ರಪ್ಪ, ಬಲವಂತ, ವೆಂಕೋಬ ಪವಡಿ, ಗೋವಿಂದ ನಾಯಕ್, ಶರಣಗೌಡ ಗುರಿಕಾರ್, ಅಂಬೇಡ್ಕರ್ ಸಂಘದ ಅಧ್ಯಕ್ಷ ವಿನೋದ್, ಯೋಗಪ್ಪ ದೊಡ್ಮನಿ,ಶಿವರಾಜ್ ಟೈಲರ್, ಗಂಗಪ್ಪ ಶಾಕೋದಿ ಕಾರ್ಮಿಕ ಮುಖಂಡರು, ಗುಳಪ್ಪ, ಬಸವರಾಜ್, ಸಾಬಣ್ಣ, ಗಿರಿ, ಶ್ರೀನಿವಾಸ್ ಮಧುಶ್ರೀ ಸೇರಿದಂತೆ ಇನ್ನು ಅನೇಕ ಮುಖಂಡರು ಗಣೇಶನ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು ಹಟ್ಟಿ ಕಾ ಛೋಟಾ ಮಹಾರಾಜ್ ರೋಹನ್ ಗೆಳೆಯರಾದ ಮೌನೇಶ್, ಮಣಿಕಂಠ, ಮಂಜುನಾಥ್, ಆದರ್ಶ್, ಭರತ್, ತರುಣ್, ಮಧು, ಆಕಾಶ್, ಅಭಿ, ನೀರಜ್ , ಶೋಹೀಲ್, ರಿಜ್ವಾನ್, ಚೇತನ್, ರಜತ್, ಯದುವೀರ್ ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




