Ad imageAd image

ಹಜರತ್ ಹುಸೇನಿ ಅಲಂ ದಗಾ೯ದ ನೂತನ ಕಮಿಟಿಯ ಕಾನೂನು ಹಾಗೂ ವಕ್ಫ್ ಬೋರ್ಡ್ ನಿಯಮ ಪ್ರಕಾರ ಯಾಗಿಲ್ಲ: ಮಹಮ್ಮದ್ ರಫಿ.

Bharath Vaibhav
WhatsApp Group Join Now
Telegram Group Join Now

ಮುದಗಲ್ :- ಹಜರತ್ ಹುಸೇನಿ ಅಲಂ ದಗಾ೯ದ ನೂತನ ಕಮಿಟಿಯ ಕಾನೂನು ಹಾಗೂ ವಕ್ಫ್ ಬೋರ್ಡ್ ನಿಯಮ ಪ್ರಕಾರ ಯಾಗಿಲ್ಲ.ಸ್ಥಳೀಯ ದಗಾ೯ಗಳ ಮುಖಂಡರ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿರುವದು ಖಂಡನಿಯವಾಗಿದೆ ಹಾಗೂ ವಕ್ಫ್ ಬೋರ್ಡ್ ನಿಯಮಗಳು ಗಾಳಿಗೆ ತೂರಿ ಇದರಲ್ಲಿ ರಾಜಕೀಯದ ಪ್ರಬವ ಹೆಚ್ಚು ಕಾಣಬಹುದು ಎಂದು ಎಂ. ಡಿ ರಫೀಕ್ ರವಿವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದರು.

ಪಟ್ಟಣದಲ್ಲಿ ಎಲ್ಲ ದರ್ಗಾಗಳಿಗೆ ವಯಕ್ತಿಕ ಸಮಿತಿಗಳಿದ್ದರೂ ಕೂಡ ಕಿಲ್ಲಾದ ಹುಸೇನಿ ಆಲಂ ದರ್ಗಾ ದಲ್ಲಿ ಮಾತ್ರ ವಕ್ಷ್ ಮಂಡಳಿಯಿಂದ ಸಮಿತಿ ಆಯ್ಕೆಯಾಗ ಬೇಕಾಗುತ್ತದೆ.
ವಕ್ಷ್ ಮಂಡಳಿ ಯವರು ಸ್ಥಳೀಯವಾಗಿ ಸಭೆ ಕರೆದು, ಕಿಲ್ಲಾ ದಲ್ಲಿರುವ ಮುಸ್ಲಿಂ ಸಮಾಜ ಬಾಂಧವರನ್ನು ಗಣನೆಗೆ ತೆಗೆದುಕೊಂಡು ಸಮಿತಿ ರಚನೆ ಮಾಡಬೇಕಾಗಿದೆ ಆದರೆ ರಾಜಕೀಯವಾಗಿ ಸಮಿತಿ ರಚಿಸಿ ಕಿಲ್ಲಾ ವಾಸಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಕಿಲ್ಲಾದಲ್ಲಿ ಮೂವರು ಪುರಸಭೆ ಸದಸ್ಯರಿದ್ದು, ಅಲ್ಪಸಂಖ್ಯಾತ ಘಟಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿದ್ದರೂ ಕೂಡ ಅವರ ಗಮನಕ್ಕೆ ತರದೆ ಸಮಿತಿ ರಚಿಸಿ ಕಿಲ್ಲಾದ ವಾಸಿಗರಿಗೆ ನಿರ್ಲಕ್ಷಿಸಿದ್ದಾರೆ.

ಮಾಜಿ ಶಾಸಕರಾದ ಹೂಲಗೇರಿಯವರು ಬೆಂಗಳೂರಿಗೆ ತೆರಳಿ ವಕ್ಸ್ ಮಂಡಳಿಯ ಸಚಿವರಿಗೆ, ಅಧಿಕಾರಿಗಳಿಗೆ ಸೂಚಿಸಿ ಆದೇಶವನ್ನು ಹೊರ ಹಾಕಿಸಿದ್ದಾರೆ ಎಂದು ಆರೋಪಿಸಿದರು ಹಾಗೂ ಬೇಕಾದವರನ್ನು ಮಾತ್ರ ಸಮಿತಿಗೆ ತೆಗೆದುಕೊಂಡರೇ ಸಮೀತಿಯನ್ನು ಖುದ್ದು ವಕ್ಷ್ ಅಧಿಕಾರಿಗಳು ಸ್ಥಳಕ್ಕೆಆಗಮಿಸಿ ರಚಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ,ಮಾಸೂಮ್ ಶರೀಫ್, ಶೇಕ್ ಹುಸೇನ್ ಎ ಟು ಝೆಡ್, ಪುರಸಭೆ ಸದಸ್ಯರು ಶಬ್ಬೀರ್ ಅಹ್ಮದ್, ಪಾಷಾ ಕಡ್ಡಿಪುಡಿ, ಪಾಷಾ ದುಮ್ ದುಮ್ ಫಾರೂಕ್ ಬೇಗ್, ಖಾಸಿಂ ಡೊಯಿ, ಹುಸೇನ್ ಹೈದೆರಾಬಾದಿ, ಮಹಿಬೂಬ್ ದುಮ್ ದುಮ್ ವಾಹಿದ್ ಸೆಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!